ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಹಿನ್ನೆಲೆಯಲ್ಲಿ ರಥ ಮಂದಿರದಿಂದ ಬ್ರಹ್ಮರಥವನ್ನು ರಥಬೀದಿಗೆ ತಂದಿರಿಸಲಾಗಿದೆ.
ಎ. 10ರಂದು ವಾರ್ಷಿಕ ಜಾತ್ರೆ ಆರಂಭ ಗೊಳ್ಳಲಿದ್ದು, ಎ. 17ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಾಗಿ ಸಂಕಷ್ಟ ಚತುರ್ಥಿಯಂದು ರಥವನ್ನು ಹೊರಗೆ ತರಲಾಗಿದೆ. ಬ್ರಹ್ಮರಥ ಕಟ್ಟುವ ಕೆಲಸ ಆರಂಭವಾಗಲಿದೆ.
ಪ್ರಥಮ ಹಂತದಲ್ಲಿ ಸ್ಟೀಲ್ ಕಂಬಗಳು ಮತ್ತು ಪತಾಕೆಯ ಗೋಲವನ್ನು ಅಳವಡಿಸುವ ಕಾಮಗಾರಿ ನಡೆಯಲಿದೆ. ದೇವಾಲಯದ ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಮಾರ್ಗದರ್ಶನದಲ್ಲಿ ಕೆಲಸ ಕಾರ್ಯಗಳು ನಡೆಯಲಿವೆ. ಬ್ರಹ್ಮರಥಕ್ಕೆ ಪತಾಕೆ ಕಟ್ಟುವ ಶಿಖರ ಕಲಶವನ್ನು ಇರಿಸುವ ಹಾಗೂ ಇತರ ಸಿಂಗಾರದ ಕೆಲಸಗಳನ್ನು ಕುಕ್ಕೆ ಸುಬ್ರಹ್ಮಣ್ಯದ ರಥ ಕುಶಲ ಕರ್ಮಿಗಳು ನಿರ್ವಹಿಸಲಿದ್ದಾರೆ.ರಥವನ್ನು ಹೊರಗೆ ತರುವ ಸಂದರ್ಭ ಸಿವಿಲ್ ಎಂಜಿನಿಯರ್ ರಾಮಚಂದ್ರ ಘಾಟೆ, ದೇಗುಲದ ನಿತ್ಯ ಕರಸೇವಕರು, ದೇಗುಲದ ನೌಕರರು, ಭಕ್ತರು ಉಪಸ್ಥಿತರಿದ್ದರು.