Home ಧಾರ್ಮಿಕ ಸುದ್ದಿ ಭಕ್ತರೆಡೆಗೆ ತೆರಳುವ ಪುತ್ತೂರ ಈಶ

ಭಕ್ತರೆಡೆಗೆ ತೆರಳುವ ಪುತ್ತೂರ ಈಶ

828
0
SHARE

ಪುತ್ತೂರು : ಪ್ರತಿ ಭಕ್ತರು ಬಳಿಗೆ ದೇವರೇ ತೆರಳಿ ಪೂಜೆ ಪಡೆಯುವ ವಿಶಿಷ್ಟ ಸಂಪ್ರದಾಯ ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವರದ್ದು. ಈ ಹಿನ್ನೆಲೆಯಲ್ಲಿ ಜಾತ್ರೆ ಸಂದರ್ಭ ಪ್ರತಿ ದಿನ ಒಂದೊಂದು ಕಡೆಗೆ ಸಂಜೆ ವೇಳೆ ದೇವರ ಸವಾರಿ ಹೊರಡುತ್ತದೆ.

ಶುಕ್ರವಾರ ಸಂಜೆ ದೇವಸ್ಥಾನದಲ್ಲಿ ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ಬಳಿಕ ಪೇಟೆ ಸವಾರಿಗೆ ದೇವರು ಹೊರಟರು. ಕೋರ್ಟ್‌ ರಸ್ತೆಯಾಗಿ ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲ್‌ಗೆ ತೆರಳುವ ಹಾದಿಯಲ್ಲಿ ವಿವಿಧ ಕಟ್ಟೆಪೂಜೆ ನಡೆಯಿತು. ಇದೇ ಸಂದರ್ಭ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here