Home ಧಾರ್ಮಿಕ ಸುದ್ದಿ ಪುತ್ತೂರು ದಸರಾ ಗಣಪತಿ, ಶಾರದೆ,ನವದುರ್ಗೆಯರ ವಿಗ್ರಹ ಪ್ರತಿಷ್ಠೆ

ಪುತ್ತೂರು ದಸರಾ ಗಣಪತಿ, ಶಾರದೆ,ನವದುರ್ಗೆಯರ ವಿಗ್ರಹ ಪ್ರತಿಷ್ಠೆ

934
0
SHARE

ಪುತ್ತೂರು : ಧರ್ಮ ಮಾರ್ಗದ ಮೂಲಕ ಲೋಕಕ್ಕೆ ಸಂದೇಶ ಸಾರಿದ ದೇವಿಯರ ಆರಾಧನೆ ಸಮಾಜದ ಪರಿವರ್ತನೆಗೆ ದಾರಿ. ದೇವರ ಆರಾಧನೆಯೊಂದಿಗೆ ಪ್ರೀತಿ, ಸಹಕಾ ರದೊಂದಿಗಿನ ಆರೋಗ್ಯಕರ ಬದುಕು ನಮ್ಮದಾಗಬೇಕು ಎಂದು ಪುತ್ತೂರು ನಗರ ಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಹೇಳಿದರು.

ಪುತ್ತೂರು ದಸರಾ ನವದುರ್ಗಾರಾಧನ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯುವ 16ನೇ ವರ್ಷದ ಗಣಪತಿ, ಶಾರದೆ, ನವದು
ರ್ಗೆಯರ ಸಹಿತ ಪುತ್ತೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯ, ನ್ಯಾಯದ ಹಾದಿಯಲ್ಲಿ ಸಾಗುವು ದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಹೆಚ್ಚುತ್ತದೆ. ಈ ಕಾರಣಕ್ಕಾಗಿ ಅಸತ್ಯ, ಅಧರ್ಮವನ್ನು ದೂರ ಮಾಡುವ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡಬೇಕು. ದೇವರ ಹಬ್ಬದ ಉತ್ಸವ ದೊಂದಿಗಿನ ಮಾರ್ಗದರ್ಶನದಿಂದ ಧರ್ಮದ ಹಾದಿಯಲ್ಲಿ ನಡೆಯಲು ಪ್ರೇರಣೆ ಪಡೆಯಬೇಕು. ಮೈಸೂರು, ಮಂಗಳೂರಿನಂತೆ ಪುತ್ತೂರಿನಲ್ಲೂ ನಾಡಹಬ್ಬ
ಆಚರಿಸುತ್ತಿರುವುದು ಖುಷಿಯ ವಿಚಾರ.

ವರ್ಷದಿಂದ ವರ್ಷಕ್ಕೆ ಇಲ್ಲಿನ ಹಬ್ಬದ ಸಂಭ್ರಮ ಹೆಚ್ಚಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್‌ ರಾವ್‌ ಮಾತ ನಾಡಿ, ಪುತ್ತೂರಿನಲ್ಲೂ ನವರಾತ್ರಿ ಸಂಭ್ರಮದ ಆಚರಣೆಯ ಅವಕಾಶವನ್ನು ಹುಟ್ಟಿಹಾಕಿ ಬೆಳೆಸಿದ ಶ್ರೇಯಸ್ಸಿನ ಸಿಂಹಪಾಲು ಪ್ರೀತಂ ಪುತ್ತೂರಾಯ ಅವರಿಗೆ ಸಲ್ಲುತ್ತದೆ. ಆರಾಧನೆಗಳು ಸಂಸ್ಕೃತಿಯನ್ನು ಪರಿಸರಿಸುವ ಜತೆಗೆ ಮನುಷ್ಯನ ಖುಷಿ, ನೆಮ್ಮದಿಯನ್ನು ಹೆಚ್ಚಿಸುತ್ತದೆ ಎಂದರು.

ಧರ್ಮ ಸಂಸ್ಥಾಪನೆಯ ಸಂಭ್ರಮ ಅಧ್ಯಕ್ಷತೆ ವಹಿಸಿದ ನವದುರ್ಗಾರಾಧನ ಸಮಿತಿಯ ಕಾರ್ಯಾಧ್ಯಕ್ಷ ಪುತ್ತೂರಿನಲ್ಲಿ 15 ವರ್ಷಗಳಿಂದ ನವರಾತ್ರಿ ಹಬ್ಬವನ್ನು ಶ್ರದ್ಧೆ, ಭಕ್ತಿ, ಶಸ್ತಿನಿಂದ ನಡೆಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ಆರಾಧನೆ ಎಂದರೆ ಧರ್ಮದ ಸಂಸ್ಥಾಪನೆಯಾದ ಸಂಭ್ರಮ. ಎಲ್ಲರೂ ಕೈಜೋಡಿಸುವ ಮೂಲಕ ಪುತ್ತೂರಿನ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸ ಬೇಕು ಎಂದರು.

ನವದುರ್ಗಾರಾಧನ ಸಮಿತಿಯ ಸಂಚಾಲಕ ಪ್ರೀತಂ ಪುತ್ತೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಿಯ ಪ್ರತಿಷ್ಠೆ ನಡೆದು ಅ. 14ರಂದು ಶ್ರೀಚಕ್ರ ಪೂಜೆ, ಅ. 21ರಂದು
ಚಂಡಿಕಾ ಹವನ, ಸೇವೆ ಮಾಡಿಸದವರಿಗೆ ಸೀರೆ ವಿತರಣೆ, ಮೆರವಣಿಗೆ ನಡೆಯಲಿದೆ. ನೆರೆ ಪ್ರವಾಹದ ಕಾರಣ ಈ ಬಾರಿ ಸರಳವಾಗಿ ಮೆರವಣಿಗೆ ನಡೆಸಲಾಗುತ್ತದೆ ಎಂದರು.

ಪುತ್ತೂರು ನರೇಂದ್ರ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿ ಸುಭಾಸ್‌ ರೈ ಬೆಳ್ಳಿಪ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು.

LEAVE A REPLY

Please enter your comment!
Please enter your name here