ನಗರ : ವರುಣ ಕೃಪೆ ತೋರದೆ ಕಂಗಾಲಾಗಿರುವ ಜನರಿಗೆ ಮಳೆಯ ಸಿಂಚನದ ಮೂಲಕ ರಕ್ಷಣೆ ನೀಡುವಂತೆ ಮಂಗಳವಾರವೂ ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರನಿಗೆ ವಿಶೇಷ ಸೀಯಾಳ ಅಭಿಷೇಕ ಸೇವೆ ನಡೆಸಲಾಯಿತು.
ಸುಮಾರು 18 ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದ ಗಣೇಶೋತ್ಸವ ಸಮಿತಿಯಿಂದ ಉತ್ತಮ ಮಳೆಯೊಂದಿಗೆ ಸುಭಿಕ್ಷೆಗೆ ಪ್ರಾರ್ಥಿಸಿ ಸೀಯಾಳ ಅಭಿಷೇಕ ನಡೆಸಲಾಗುತ್ತಿದೆ. ಮಂಗಳವಾರ ಭಕ್ತರ ಸಹಕಾರದೊಂದಿಗೆ ದೇವರಿಗೆ 19ನೇ ವರ್ಷದ ಸೀಯಾಳ ಅಭಿಷೇಕ ಸೇವೆ ನಡೆಸಲಾಯಿತು.
ದೇವಾಲಯದ ಅರ್ಚಕ ವಸಂತ ಕುಮಾರ್ ಕೆದಿಲಾಯ ವಿಧಿ ವಿಧಾನ ನೆರವೇರಿಸಿದರು. ಸಮಿತಿಯಿಂದ ಹಾಗೂ ಭಕ್ತರು 1,500ಕ್ಕೂ ಮಿಕ್ಕಿ ಸೀಯಾಳಗಳನ್ನು ಒಪ್ಪಿಸಿ ಅಭಿಷೇಕ ಮಾಡಿಸಿದರು.
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ| ಎಂ.ಕೆ. ಪ್ರಸಾದ್, ಅಧ್ಯಕ್ಷ ಶಶಾಂಕ್ ಕೋಟೆಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪದಾಧಿಕಾರಿಗಳಾದ ಚಂದ್ರಶೇಖರ್ ಪಾಟಾಳಿ, ಚಿನ್ಮಯ ರೈ, ಅಜಿತ್ ರೈ, ದಿನೇಶ್ ಪಂಜಿಗ, ದಿನೇಶ್ ಬೈಪಾಸ್, ಪುರುಷೋತ್ತಮ ಕೋಲ್ಪೆ, ಶ್ರೀನಿವಾಸ, ಕೃಷ್ಣಪ್ಪ ಸಾಧು ಶೆಟ್ಟಿ, ನವೀನ್ ರೈ ಪಂಜಳ ಪಾಲ್ಗೊಂಡರು.