Home ಧಾರ್ಮಿಕ ಸುದ್ದಿ ಭಜನೆಯಿಂದ ಸಾಮಾಜಿಕ ಪ್ರಜ್ಞೆಯ ಜಾಗೃತಿ: ಹೇಮಾವತಿ ಹೆಗ್ಗಡೆ

ಭಜನೆಯಿಂದ ಸಾಮಾಜಿಕ ಪ್ರಜ್ಞೆಯ ಜಾಗೃತಿ: ಹೇಮಾವತಿ ಹೆಗ್ಗಡೆ

ಪುತ್ತೂರಿನಲ್ಲಿ ಭಜನ ಸತ್ಸಂಗ ಸಮಾವೇಶ

1102
0
SHARE

ಪುತ್ತೂರು: ಭಜನೆಯು ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯ ಜಾಗೃತಿಗೆ ಅಗತ್ಯ ಮಾಧ್ಯಮ. ಭಕ್ತಿ, ಭಾವದೊಂದಿಗಿನ ಶ್ರದ್ಧೆಯ ಸ್ತುತಿಗೆ ಭಗವಂತನ ಅನುಗ್ರಹ ಸಿಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌, ಭಜನ ಸತ್ಸಂಗ ಸಮಾವೇಶ ಸಮಿತಿ ಪುತ್ತೂರು, ಶ್ರೀ ಕ್ಷೇ. ಧ. ಗ್ರಾ. ಯೋಜನೆ ಪುತ್ತೂರು ಸಹಯೋಗದಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ರವಿವಾರ ನಡೆದ ಬೃಹತ್‌ ಭಜನ ಸತ್ಸಂಗ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ದೊಡ್ಡ ಪರಿಣಾಮದ ಕಾರ್ಯಕ್ರಮ
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪುತ್ತೂರಿನಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ಭಜನ ಸತ್ಸಂಗ ನಡೆದಿರುವುದು ಖುಷಿ ನೀಡಿದೆ ಎಂದರು.

ಅಭೂತಪೂರ್ವ: ಸುಬ್ರಹ್ಮಣ್ಯ ಶ್ರೀ
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಜನ ಸತ್ಸಂಗ ಸಮಾವೇಶದಲ್ಲಿ ಅಭೂತಪೂರ್ವ ಸಂಖ್ಯೆಯ ಜನರು ಪಾಲ್ಗೊಳ್ಳುವ ಮೂಲಕ ಜಾಗೃತಿ ಸಾಬೀತುಪಡಿಸಿದ್ದಾರೆ. ರಾಮಮಂದಿರದ ವಿಚಾರದಲ್ಲೂ ಇಂತಹ ಜಾಗೃತಿ ಕೆಲಸ ಮಾಡಬೇಕಾ ಗಿದೆ ಎಂದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಗ್ರಾಮಾಭಿ ವೃದ್ಧಿ ಯೋಜನೆಯ ಸಿಇಒ ಡಾ| ಎಲ್‌.ಎಚ್‌. ಮಂಜುನಾಥ್‌, ತಾ.ಪಂ. ಇಒ ನವೀನ್‌ ಭಂಡಾರಿ, ಸಮಿತಿ ಗೌರವ ಸಲಹೆಗಾರರಾದ ಮಲ್ಲಿಕಾ ಪ್ರಸಾದ್‌, ಶಕುಂತಳಾ ಟಿ. ಶೆಟ್ಟಿ, ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಸಮಿತಿಯ ಪ್ರಮುಖರಾದ ರಾಮಣ್ಣ ಗೌಡ ಗುಂಡೋಳೆ, ಸಾಜ ರಾಧಾಕೃಷ್ಣ ಆಳ್ವ, ಪದ್ಮಾನಾಭ ಶೆಟ್ಟಿ, ಮಹಾಬಲ ರೈ ಒಳತ್ತಡ್ಕ, ಚಂದ್ರನ್‌ ತಲಪಾಡಿ, ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ, ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು.

ಸತ್ಸಂಗ ಸಮಿತಿ ಕಾರ್ಯಾಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ ಪ್ರಸ್ತಾ ವನೆಗೈದರು. ಅಧ್ಯಕ್ಷ ಧನ್ಯಕುಮಾರ್‌ ಬೆಳಿಯೂರುಗುತ್ತು ಸ್ವಾಗತಿಸಿ, ಸಂಚಾಲಕ ಶಶಿಕುಮಾರ್‌ ಬಾಲ್ಯೊಟ್ಟು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಬೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.

ಸರಕಾರಕ್ಕೆ ಬೇಡಿಕೆ
ಭಜನ ಮಂದಿರಗಳು ಇರುವ ಸ್ಥಳವನ್ನು ಸಕ್ರಮಗೊಳಿಸಿ ಮಂದಿರಗಳ ಹೆಸರಿಗೆ ನೀಡಬೇಕು, ಭಜನ ಪರಿಷತ್‌ಗೆ ಭಜನ ಅಕಾಡೆಮಿ ಗೌರವ ನೀಡಬೇಕು, ಹನುಮ ಜಯಂತಿ ದಿನವನ್ನು ಭಜನ ದಿನವಾಗಿ ಆಚರಿಸಲು ಘೋಷಣೆ ಮಾಡಬೇಕು ಮೊದಲಾದ 10 ಬೇಡಿಕೆಗಳನ್ನು ಶಾಸಕ ಸಂಜೀವ ಮಠಂದೂರು ಅವರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.

ನಗರ ಸಂಕೀರ್ತನೆ
ಅಪರಾಹ್ನ ನಗರದ ಮುಖ್ಯ ರಸ್ತೆಯಲ್ಲಿ ಸುಮಾರು 25 ಸಾವಿರಕ್ಕೂ ಮಿಕ್ಕಿ ಭಜಕರು ದೇವರ ನಾಮ ಸಂಕೀರ್ತನೆ ಯಾತ್ರೆ ನಡೆಸಿದರು. ಕೋಟಿ ಶಿವ ಪಂಚಾಕ್ಷರಿ ಪಠಣ ಸಂಜೆ ಪ್ರಧಾನ ವೇದಿಕೆಯಲ್ಲಿ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಜಪಯಜ್ಞ ನಡೆಯಿತು. ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ಸಾವಿರಾರು ಭಜಕರು 108 ಶಿವ ಜಪ ಉಚ್ಚರಿಸಿದರು.

LEAVE A REPLY

Please enter your comment!
Please enter your name here