ಉಡುಪಿ: ನ್ಯೂಜಿಲ್ಯಾಂಡ್ ಸಂಚಾರದಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರನ್ನು ನ್ಯೂಜಿಲ್ಯಾಂಡ್ ಆಕ್ಲಂಡ್ ಸಂಸದ ಮೈಕಲ್ ವುಡ್ ತಮ್ಮ ನಿವಾಸಕ್ಕೆ ಬರಮಾಡಿಕೊಂಡು ಪ್ರಧಾನಮಂತ್ರಿ ಜಕಿಂಡಾ ಅಡ್ರೇನ್ ರಿಗೆ ಸುಖಮಯ ಪ್ರಸವಕ್ಕಾಗಿ ಶ್ರೀಪಾದರ ಆಶೀರ್ವಾದವನ್ನು ಕೋರಿದರು. ಹಿಂದೂ ಸಾಂಪ್ರದಾಯಿಕ ರೀತಿಯಲ್ಲಿ ಸಂಸದರು ಸ್ವಾಗತಿಸಿದರು. ವಿಶ್ವಶಾಂತಿಗಾಗಿ ಧಾರ್ಮಿಕ ನಾಯಕರ ಒಕ್ಕೂಟದ ಮುಖ್ಯಸ್ಥರಾಗಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥಪಾದರ ಚಿಂತನೆ ಹಾಗೂ ಕಾರ್ಯ
ವೈಖರಿಗಳನ್ನು ಶ್ಲಾ ಸಿದ ಮೈಕಲ್ ವುಡ್ ಶ್ರೀಪಾದರಿಗೆ ಗೌರವ ಸಲ್ಲಿಸಿದರು.
ಆಶೀರ್ವಚನಗೈದ ಶ್ರೀಪಾದರು, ನ್ಯೂಜಿಲಂಡ್ ನಾಗರಿಕರ, ಅನಿವಾಸಿ ಭಾರತೀಯರ ಪರಿಶುದ್ಧ ಭಕ್ತಿ ಹಾಗೂ ಸನಾತನ ಹಿಂದೂ ಧರ್ಮದ ಕುರಿತಾದ ಶ್ರದ್ಧೆ -ಅಭಿಮಾನ ಅಚ್ಚರಿಗೊಳಿಸಿದೆ. ನ್ಯೂಜಿಲಂಡ್ ನ್ಯೂಜಿಲ್ನಿಂದ ಅನ್ವರ್ಥ ಎನಿಸಿದೆ ಎಂದರು. ಸಂಸದರಿಗೆ ಶ್ರೀಪಾದರು ವಿಶ್ವಶಾಂತಿಯ ಸಂಕೇತವಾದ ಧರಣಿದೇವಿ ಚಿತ್ರಪಟವನ್ನು ಸ್ಮರಣಿಕೆಯಾಗಿ ನೀಡಿ ಆಶೀರ್ವದಿಸಿದರು. ಸತ್ಯಕುಮಾರ್, ಡಾ| ಕಲಬುರ್ಗಿ, ಎಂ. ಪ್ರಸನ್ನ ಆಚಾರ್ಯ, ಉಮೇಶ್, ವಿಶ್ವನಾಥ್ ಉಪಸ್ಥಿತರಿದ್ದರು.