ಪುತ್ತೂರು : ಉತ್ಥಾನ ದ್ವಾದಶಿ (ತುಳಸಿ ಪೂಜೆ)ಯಂದು ಶ್ರೀ ವೆಂಕಟ ರಮಣ ದೇವರ ಉತ್ಸವ ಆರಂಭವಾಗಲಿದ್ದು, ನ. 23ರಂದು ಕುರಿಂದು ಸೇವೆ (ಗುರ್ಜಿ) ನಡೆಯಲಿದೆ. ನ. 20ರಂದು ಉತ್ಥಾನ ದ್ವಾದಶಿ. ಅಂದು ಶ್ರೀ ವೆಂಕಟರಮಣ ದೇವರ ವಾರ್ಷಿಕ ಉತ್ಸವಗಳಿಗೆ ಚಾಲನೆ ಸಿಗಲಿದೆ. ಉಳಿದ ಕ್ಷೇತ್ರಗಳಲ್ಲಿ ದೀಪಾವಳಿ ಅಮಾವಾ ಸ್ಯೆಯಂದು ಉತ್ಸವ ಆರಂಭವಾದರೆ, ವೆಂಕಟರಮಣ ದೇವಸ್ಥಾನಗಳಲ್ಲಿ ಉತ್ಥಾನ ದ್ವಾದಶಿಯಂದು ಉತ್ಸವ ಆರಂಭ ಆಗುವುದು ವಿಶೇಷ.
ನ. 20ರಂದು ಮನೆಗಳಲ್ಲಿಯೂ ತುಳಸಿ ಪೂಜೆ ನಡೆಯುತ್ತದೆ. ಉತ್ಥಾನ ದ್ವಾದಶಿ ಯಂದು ತುಳಸಿಕಟ್ಟೆಯನ್ನು ವಿಶೇಷವಾಗಿ ಅಲಂಕಾರ ಮಾಡಿ, ರಾತ್ರಿ ವೇಳೆ ಪೂಜೆ ನೆರವೇರಿಸಲಾಗುತ್ತದೆ. ಅದೇ ರೀತಿ ಶ್ರೀ ವೆಂಕಟರಮಣ ದೇವಸ್ಥಾನಗಳ ತುಳಸಿ ಕಟ್ಟೆಯಲ್ಲಿ ದೇವರ ಉತ್ಸವ ಮೂರ್ತಿಯನ್ನು ವಿಶೇಷ ಪೀಠದಲ್ಲಿ ಕುಳ್ಳಿರಿಸಿ, ತುಳಸಿ ಪೂಜೆ ನಡೆಸಲಾಗುತ್ತದೆ. ಬಳಿಕ ಉತ್ಸವ ಮೂರ್ತಿಗೆ ಭಕ್ತರಿಂದ ಹಣ್ಣುಕಾಯಿ ಸೇವೆ, ವಾರ್ಷಿಕ ಉತ್ಸವ, ಪಟ್ಟದ ಕಾಣಿಕೆ ಸಮರ್ಪಣೆ ನಡೆಯುತ್ತದೆ.
ತುಳಸಿಕಟ್ಟೆಯಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಶ್ರೀ ವೆಂಕಟರಮಣ ದೇವರ ಉತ್ಸವ, ಬೆಳ್ಳಿ ಪಲ್ಲಕ್ಕಿಯಲ್ಲಿ ಹೊರಡುತ್ತದೆ. ಇದು ಊರಿನ ವೆಂಕಟರಮಣ ದೇವರ ಪ್ರಥಮ
ಪಲ್ಲಕ್ಕಿ ಉತ್ಸವ. ಪೇಟೆ ಸವಾರಿಯಿಂದ ದೇವರ ಉತ್ಸವ ದೇವಸ್ಥಾನಕ್ಕೆ ಹಿಂದಿರುಗಿದ ಬಳಿಕ ಹೊರಾಂಗಣದಲ್ಲಿ ವೇದ ಮಂತ್ರಗಳ ಸುತ್ತು, ಶ್ರೀಹರಿ ಸಂಕೀರ್ತನೆ ಸುತ್ತು ನೆರವೇರಿ
ಉತ್ಸವ ಒಳಗಾಗುತ್ತದೆ.
ಉತ್ಸವ ವಿಶೇಷ
ಗೌಡ ಸಾರಸ್ವತ ಸಮಾಜದಲ್ಲಿ ಕುರಿಂದು ಉತ್ಸವ ವಿಶೇಷ. ಅಂದು ಸಂಜೆ ದೇವಸ್ಥಾನದಿಂದ ದೇವರು ಹೊರಟರೆ, ಹಿಂದಿರುಗಿ ಬರಲು ಮರುದಿನ ಬೆಳಗ್ಗೆ ಆಗುತ್ತದೆ. ಪಲ್ಲಕ್ಕಿಯಲ್ಲಿ ದೇವರನ್ನು ಕರೆದೊಯ್ಯಲಾಗುತ್ತದೆ. ವಿಶೇಷವಾಗಿ ಅಲಂಕರಿಸಿರುವ ಕುರಿಂದುವಿನಲ್ಲಿ ದೇವರಿಗೆ ಪೂಜೆ ಸಲ್ಲುತ್ತದೆ.
- ರಾಮನಾಥ್ ಭಟ್, ಪುತ್ತೂರು
ಕುರಿಂದು ಸೇವೆ
ಕುರಿಂದು ಅಥವಾ ಗುರ್ಜಿ ಸೇವೆ ಎಂದು ಕರೆಸಿಕೊಳ್ಳುವ ಉತ್ಸವ ಗೌಡ ಸಾರಸ್ವತ ಸಮಾಜದಲ್ಲಿ ವಿಶೇಷ. ಏಕಾದಶಿಯಿಂದ ಕಾರ್ತಿಕ ಹುಣ್ಣಿಮೆಯ ವರೆಗೆ ಜಾತ್ರೆಯ ನಡುವೆ ಒಂದು ದಿನ ಈ ಕುರಿಂದು ಉತ್ಸವ ನಡೆಯುತ್ತದೆ. ಪುತ್ತೂರಿನ ದರ್ಬೆಯಲ್ಲಿ ಕುರಿಂದು ಉತ್ಸವ ನಡೆಸಲಾಗುತ್ತದೆ.
ರಥದ ಆಕಾರದಲ್ಲಿ ನಿರ್ಮಿಸುವ ಕಟ್ಟೆಯನ್ನು ವಿವಿಧ ವಸ್ತುಗಳಿಂದ ಶೃಂಗರಿಸಲಾಗುತ್ತದೆ. ಫಲವಸ್ತುಗಳಿಂದ ಅಲಂಕರಿಸಲಾ ಗುತ್ತದೆ. ಇಲ್ಲಿಗೆ ಶ್ರೀ ವೆಂಕಟರಮಣ ದೇವರನ್ನು ಪಲ್ಲಕ್ಕಿಯಲ್ಲಿ ಕರೆತಂದು, ಪೂಜೆ ನೀಡಲಾಗುತ್ತ¨