Home ಧಾರ್ಮಿಕ ಸುದ್ದಿ ಪರ್ಪುಂಜ: ಶ್ರೀಕೃಷ ಜನ್ಮಾಷ್ಟಮಿ ಕಾರ್ಯಕ್ರಮ

ಪರ್ಪುಂಜ: ಶ್ರೀಕೃಷ ಜನ್ಮಾಷ್ಟಮಿ ಕಾರ್ಯಕ್ರಮ

960
0
SHARE

ಬಡಗನ್ನೂರು : ಸ್ನೇಹ ಯುವಕ ಮಂಡಲ ಹಾಗೂ ಸ್ನೇಹ ಮಹಿಳಾ ಮಂಡಲ ಪರ್ಪುಂಜದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಪರ್ಪುಂಜ ರಾಮಜಾಲು ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕುರೇಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನಿರ್ಪಾಡಿ, ಪುತ್ತೂರು ಎಪಿಎಂಸಿ ಸದಸ್ಯ ಮಂಜುನಾಥ ಕೆ.ಎಸ್‌., ಮಂಗಳೂರು ಎಂಆರ್‌ಪಿಎಲ್‌ ಸೀತಾರಾಮ ರೈ, ಬೆಂಗಳೂರು ಉದ್ಯಮಿ ಗಣೇಶ್‌ ಕೋಡಿಬೈಲು, ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ಹರೀಶ್‌ ಶಾಂತಿವನ
ಉಪಸ್ಥಿತರಿದರು.

ಸಮ್ಮಾನ ಕೃಷಿ ಸಾಧಕ ನಾರಾಯಣ ರೈ ಬಾರಿಕೆ
ಹಾಗೂ ನಾಟಿ ವೈದ್ಯೆ ಪದ್ಮಾವತಿ ಚಿಕ್ಕು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಪರ್ಪುಂಜ ರಾಮಜಾಲು ಗರಡಿ
ಗೌರವಾಧ್ಯಕ್ಷ ಡೆಕ್ಕಳ ಮಹಾಬಲ ರೈ, ಒಳಮೊಗ್ರು ಗ್ರಾ.ಪಂ. ಸದಸ್ಯೆ ಸುಂದರಿ, ಹೊರ ಠಾಣೆಯ ಎಎಸ್‌ಐ ಚಕ್ರಪಾಣಿ, ಸಿಬಂದಿ ಕರುಣಾಕರ, ವಿನಯ…, ಮಿತ್ರದಾಸ್‌ ರೈ ಡೆಕ್ಕಳ, ಚೆನ್ನಪ್ಪ ಗೌಡ ಇಡಿಂಜಿಲ, ದೇವಕಿ ಮಡ್ತಿಲ, ಮೋಹನಾಂಗಿ ಪರ್ಪುಂಜ, ಸ್ನೇಹ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್‌ರಾಜ್‌ ರೈ ಪರ್ಪುಂಜ, ರಾಜೇಶ್‌ ಗೌಡ ಶೇಡಿಗುಂಡಿ, ಕಾರ್ಯದರ್ಶಿ ಶರತ್‌ ಪೂಜಾರಿ, ಸ್ನೇಹ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಟಿ., ಕಾರ್ಯದರ್ಶಿ ಪ್ರಮೀಳಾ ಎಸ್‌. ಮತ್ತು ಅನಿಲ್‌ ಬಾರಿಕೆ, ಮಾಧವ ರೈ, ಗೋವಿಂದ, ಪುರಂದರ ರೈ, ಯವಕ ಮಂಡಲ ಹಾಗೂ ಯುವತಿ ಮಂಡಲದ ಸದಸ್ಯರು, ರಾಮಜಾಲು ಗರಡಿ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಸ್ನೇಹ ಯುವಕ ಮಂಡಲದ ಸಲಹೆಗಾರ ರಾಜೇಶ್‌ ರೈ ಪರ್ಪುಂಜ ಸ್ವಾಗತಿಸಿದರು. ಸದಸ್ಯ ಅನಿಲ್‌ ಕುಮಾರ್‌ ವಂದಿಸಿದರು. ಉಪ್ಪಿನಂಗಡಿ ವಲಯ ಸಿಆರ್‌ಪಿ ಅಶ್ರಫ್
ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here