ಪುಂಜಾಲಕಟ್ಟೆ : ಕೊರಂಟ ಬೆಟ್ಟುಗುತ್ತು ಶ್ರೀ ವಿಷ್ಣುಮೂರ್ತಿ, ಕೊಡ ಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರ ದಲ್ಲಿ ಬ್ರಹ್ಮಬೈದರ್ಕಳ ಜಾತ್ರೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ರಾತ್ರಿ ಅನ್ನಸಂತರ್ಪಣೆ, ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು. ಬಳಿಕ ಬೈದರ್ಕಳು ಒಲಿ ಮರೆಯಿಂದ ಹೊರಡುವುದು, ಬೈದರ್ಕಳು ಬಾಕಿ ಮಾರು ಗದ್ದೆಗೆ ಇಳಿಯುವುದು, ಸುರ್ಯ ಹಾಕಿಕೊಳ್ಳುವುದು, ಮಾಯಾಂದತಿ ದೇವಿಯ ನೇಮ ನಡೆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಕಕ್ಯಪದವು ಗರೋಡಿ ಅಧ್ಯಕ್ಷ ಕೆ.ಮಾ ಯಿಲಪ್ಪ ಸಾಲ್ಯಾನ್, ಮುಂಬೈ ಉದ್ಯಮಿ ಅನಿಲ್ ಗಾಯಕ್ವಾಡ್, ಬಂಟ್ವಾಳ ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಪಂಜಿಕಲ್ಲು ಗರಡಿ ಸಮಿತಿಯ ಶ್ರೀಪ್ರಕಾಶ್ ಜೈನ್ ಪೀರªಬೆಟ್ಟು ಮತ್ತಿತರರು ಭಾಗವಹಿಸಿದ್ದರು. ಕ್ಷೇತ್ರದ ಆಸ್ರಣ್ಣ ಗಂಗಾಧರ ಕಕೃಣ್ಣಾಯ, ಗೌರವಾಧ್ಯಕ್ಷ ಕೆ. ಬಾಬು ಪೂಜಾರಿ, ಅಧ್ಯಕ್ಷ ಸದಾನಂದ ಪೂಜಾರಿ ಮತ್ತು ಪದಾಧಿಕಾರಿಗಳಾದ ಎ. ಕೃಷ್ಣಪ್ಪ ಪೂಜಾರಿ, ಡಾ| ಯೋಗೀಶ್ ಕೈರೋಡಿ, ಚಂದಪ್ಪ ಪೂಜಾರಿ, ಕೆ. ಬೂಬ ಪೂಜಾರಿ ಕುದ್ಕಂದೋಡಿ ಮತ್ತಿತರರಿದ್ದರು.