Home ಧಾರ್ಮಿಕ ಕಾರ್ಯಕ್ರಮ ಬ್ರಹ್ಮಬೈದರ್ಕಳ ವಾರ್ಷಿಕ ಜಾತ್ರೆ

ಬ್ರಹ್ಮಬೈದರ್ಕಳ ವಾರ್ಷಿಕ ಜಾತ್ರೆ

•ಕಕ್ಯಪದವು ಬ್ರಹ್ಮಬೈದರ್ಕಳ ಗರೋಡಿ

1299
0
SHARE
ಗರೋಡಿಯಲ್ಲಿ ಬ್ರಹ್ಮಬೈದರ್ಕಳ ನೇಮ ನಡೆಯಿತು.

ಪುಂಜಾಲಕಟ್ಟೆ: ಸುಮಾರು 3 ಕೋಟಿ ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಬ್ರಹ್ಮಕಲಶೋತ್ಸವದ ಐದನೇ ದಿನವಾದ ಮಂಗಳವಾರ ರಾತ್ರಿ ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಮತ್ತು ಕಕ್ಯ ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ, ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯ ಅವರ ಮುಂದಾಳತ್ವದಲ್ಲಿ ಬ್ರಹ್ಮಬೈದರ್ಕಳ ವಾರ್ಷಿಕ ಜಾತ್ರೆ ಜರಗಿತು.

ನೇಮ, ನಾಟಕ ಪ್ರದರ್ಶನ
ರಾತ್ರಿ ಧಾರ್ಮಿಕ ಸಭೆ ಬಳಿಕ ಬೈದೇರುಗಳು ಗರಡಿ ಇಳಿಯುವುದು, ಮಾಯಂದಾಲೆ ನೇಮ, ಅನ್ನ ಸಂತರ್ಪಣೆ ನಡೆಯಿತು. ಚಾ ಪರ್ಕ ತಂಡದವರಿಂದ ಪುಷ್ಪಕ್ಕನ ಇಮಾನ ನಾಟಕ ಪ್ರದರ್ಶನಗೊಂಡಿತು.

ಮಾಜಿ ಸಚಿವ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ, ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌, ಮೊಕ್ತೇಸರ, ಬಾರ್ದಡ್ಡು ಕುಟುಂಬಸ್ಥರಾದ ರಾಜವೀರ್‌ ಜೈನ್‌, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ಚಿತ್ತರಂಜನ್‌ ಕಂಕನಾಡಿ, ರೋಹಿನಾಥ ಪಾದೆ, ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ವಾಸ್ತುಶಿಲ್ಪಿ ಪ್ರಮಲ್ ಕುಮಾರ್‌,ಪುನರ್‌ ನಿರ್ಮಾಣ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್‌ ಆಜೋಡಿ, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ, ಉಳಿ ಯುವಕ ಮಂಡಲ ಅಧ್ಯಕ್ಷ ಸನತ್‌ ಕುಮಾರ್‌ ಮತ್ತಿತರ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಬುಧವಾರ ಮಧ್ಯಾಹ್ನ ಕೊಡಮಣಿ ತ್ತಾಯಿ ಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯಿ ನೇಮ, ಧ್ವಜಾ ವರೋಹಣ, ಸ್ಥಳ ಶುದ್ಧಿ, ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here