ಸುರತ್ಕಲ್: ಬಾಳ ಸಾನದ ಹೊಸಮನೆ ಸೊರಪರ ಚಾವಡಿಯಲ್ಲಿ ಶುಕ್ರವಾರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಶುಕ್ರವಾರ ಜರಗಿತು.
ನವೀಕರಿಸಲ್ಪಟ್ಟ ನೂತನ ಗರ್ಭಗುಡಿಯಲ್ಲಿ ಮೂಲ ಮೈಸಂದಾಯ, ಮರಾಳ, ಧೂಮಾವತೀ, ಬಂಟ, ಪರಿವಾರ ದೈವಗಳ ಪುನಃ ಪ್ರತಿಷ್ಠೆ ಬಳಿಕ 49ಕಲಶಗಳ ಬ್ರಹ್ಮಕಲಶವು ವೇ| ಮೂ| ಹರಿದಾಸ ಉಡುಪರ ಪೌರೋಹಿತ್ಯದಲ್ಲಿ ಜರ ಗಿತು. ಮೇ 11ರಂದು ನಾಗಬ್ರಹ್ಮ ಸ್ಥಾನದಲ್ಲಿ ನಾಗಬ್ರಹ್ಮ, ರಕ್ತೇಶ್ವರೀ, ಮರಾಳ, ಧೂಮಾವತಿ, ಯಕ್ಷಿವನ ದೇವರಿಗೆ ಕಲಶಾಭಿಷೇಕ, ಆಶ್ಲೇಷಾಬಲಿ, ವಾರ್ಷಿಕೋತ್ಸವ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆೆ.
ಮೇ 12ರಂದು ತುಡಾರ ಬಲಿ ಸೇವೆ ಮತ್ತು ಮಾಲಕಾರ್ಯ ಜರಗಲಿದೆ. ಮೇ 13ರಂದು ವಾರ್ಷಿಕ ಬಂಡಿ, ನೇಮ ನೆರವೇರಲಿದೆ.