ಪೊಳಲಿ: ಇಲ್ಲಿನ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಬಿಲ್ಲವ ಸಮಾಜದ ವತಿಯಿಂದ ಸೇವಾ ರೂಪವಾಗಿ ಸಮರ್ಪಿಸಿದ ನೂತನ ಧ್ವಜಸ್ತಂಭದ ಕೆಲಸಗಳು ಭರದಿಂದ ಸಾಗುತ್ತಿದೆ. ಮರದ ಕೆತ್ತನೆಯನ್ನು ಪೂರ್ಣಗೊಳಿಸಿ ಸುಮಾರು 8,000 ಲೀಟರ್ ಶುದ್ಧ ಎಳ್ಳೆಣ್ಣೆಯಲ್ಲಿ ಇರಿಸಲಾಗಿದ್ದು, ಧ್ವಜಸ್ತಂಭದ ಎಳ್ಳೆಣ್ಣೆಯನ್ನು ರವಿವಾರ ತೆಗೆಯಲಾಯಿತು.
ಡಿ. 18ರಂದು ಬೆ ಳಗ್ಗೆ 9ರಿಂದ 10ರ ಒಳಗೆ ಧ್ವಜಸ್ತಂಭದ ಮರವನ್ನು ತೆಗೆಯಲಿರುವುದು. ಡಿ. 21ರಂದು ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಭೂಮಿ ಪೂಜೆ, ಡಿ. 28ರಂದು ಧ್ವಜಸ್ತಂಭದ ಪೀಠ, ಆಧಾರ ಶಿಲೆ ಕ್ಷೇತ್ರಕ್ಕೆ ತರುವು ದು, ಡಿ. 31ಆಧಾರ ಶಿಲಾನ್ಯಾಸಕ್ಕೆ ದ್ರವ್ಯಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಜನವರಿ 2ರ ಸಾಯಂಕಾಲ ಧ್ವಜಸ್ತಂಭದ ಮರಕ್ಕೆ ಕುತ್ತಿಪೂಜೆ (ಮರ ಮುಹೂರ್ತ). ಜ. 10 ಧ್ವಜಸ್ತಂಭದ ಮರಕ್ಕೆ ಕಂಚಿನವರಿಂದ ತಾಮ್ರ ಹೊಡೆಯುವುದು, ಜ. 21ರಂದು ಕ್ಷೇತ್ರದ ರಾಜಾಂಗಣದಲ್ಲಿ ನೂತನ ಧ್ವಜಸ್ತಂಭದ ಸ್ಥಾಪನೆ ನಡೆಯಲಿ ದೆ ಎಂದು ಪ್ರಕಟನೆ ತಿಳಿಸಿದೆ.