Home ಧಾರ್ಮಿಕ ಸುದ್ದಿ ಪೊಳಲಿ ಬ್ರಹ್ಮಕಲಶೋತ್ಸವ ಕುಂಭೇಶ ಕರ್ಕರಿ ಕಲಶಪೂಜೆ, ಶಯ್ನಾಪೂಜೆ

ಪೊಳಲಿ ಬ್ರಹ್ಮಕಲಶೋತ್ಸವ ಕುಂಭೇಶ ಕರ್ಕರಿ ಕಲಶಪೂಜೆ, ಶಯ್ನಾಪೂಜೆ

479
0
SHARE

ಪೊಳಲಿ: ಪೊಳಲಿ ಶ್ರೀರಾಜ ರಾಜೇಶ್ವರೀ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶನಿ ವಾರ ಹಲವು ಧಾರ್ಮಿಕ ವಿಧಿವಿಧಾನಗಳು ಜರ ಗಿ ದವು. ಬೆಳ ಗ್ಗೆ 5ರಿಂದ ಪುಣ್ಯಾಹ, ಗಣಹೋಮ, ಪೂರ್ಣಗ್ರಹಶಾಂತಿ ಹೋಮ, ಸಂಹಾರತತ್ವ ಕಲಶ ಪೂಜೆ, ಸಂಹಾರತತ್ವ ಹೋಮ, ಕುಂಭೇಶ ಕರ್ಕರಿ ಕಲಶಪೂಜೆ, ಶಯ್ನಾಪೂಜೆ, ವಿಧ್ಯೇಶ ಕಲಶಪೂಜೆ, ಸಂಹಾರತತ್ವ ಕಲಶಾಭಿಷೇಕ, ಜೀವೋದ್ವಾಸನೆ, ಜೀವಕಲಶ, ಶಯ್ನಾ ನಯನ, ಶಯೆÂಯಲ್ಲಿ ಮಹಾ ಪೂಜೆ, ಅಂಕುರ ಪೂಜೆ, ಬಿಂಬಶುದ್ಧಿ ಹಾಗೂ ಕಲಶಾಭಿಷೇಕ ನಡೆಸಲಾಯಿತು.

ಸಂಜೆ 4ರಿಂದ ಶ್ರೀದುರ್ಗಾ ಪರಮೇಶ್ವರೀ ಸಪರಿವಾರ ಶ್ರೀ ರಾಜರಾಜೇಶ್ವರೀ ದೇವರಿಗೆ ನಿದ್ರಾ ಕಲಶಪೂಜೆ, ಶಿರಸ್ತತ್ವ ಹೋಮ, ಧ್ಯಾನಾಧಿವಾಸ ಹೋಮ, ಕ್ಷೇತ್ರಪಾಲ, ಶ್ರೀಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಗಳ ಅಧಿವಾಸ, ಅಧಿವಾಸ ಹೋಮ, ಅಂಕುರಪೂಜೆ ನಡೆಸಲಾಯಿತು. ಭಜನೆ, ಸ್ಯಾಕೊÕàಫೋನ್‌ ವಾದನ, ಹಿಂದೂಸ್ಥಾನಿ ಗಾಯನ, ನೃತ್ಯ, ಮಂಗಳವಾದ್ಯ ಮೊದ ಲಾ ದ‌ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಇಂದು ದೇವರ ಪ್ರತಿಷ್ಠೆ
ಬೆಳಗ್ಗೆ 4ರಿಂದ ಪುಣ್ಯಾಹ, ಗಣಹೋಮ, ಪ್ರಾಸಾದ ಪ್ರತಿಷ್ಠೆ, 7.23ರಿಂದ 8.23ರ ವರೆಗಿನ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀದುರ್ಗಾ ಪರಮೇಶ್ವರೀ, ಶ್ರೀರಾಜರಾಜೇಶ್ವರೀ, ಶ್ರೀಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ ದೇವರುಗಳ ಪ್ರತಿಷ್ಠೆ-ಜೀವಕಲಶಾಭಿಷೇಕ, ನ್ಯಾಸಾದಿಗಳು, ಪ್ರತಿಷ್ಠಾಪೂಜೆ, ಪ್ರತಿಷ್ಠಾಬಲಿ, 10.40ಕ್ಕೆ ನಡೆಯುವ ವೃಷಭ ಲಗ್ನದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ, ಕ್ಷೇತ್ರಪಾಲಸಹಿತ ದೈವಗಳ ಪ್ರತಿಷ್ಠೆ, ಅಂಕುರಪೂಜೆ, ಮಹಾಪೂಜೆ ನಡೆಯಲಿದೆ. ಸಾಯಂಕಾಲ 5ರಿಂದ ದುರ್ಗಾಪೂಜೆ, ಇಂದ್ರಾದಿ ದಿಕಾ³ಲ ಪ್ರತಿಷ್ಠೆ, ಮಾತೃಕಾಪೀಠ ಹಾಗು ನೀರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರಪೂಜೆ, ಮಹಾಬಲಿಪೀಠಾದಿವಾಸ, ಕ್ಷೇತ್ರಪಾಲಾದಿ ದೈವಗಳಿಗೆ ಕಲಶಾ ವಾಸ ಅ ವಾಸ ಹೋಮ, ಮಹಾಪೂಜೆ ನಡೆಯಲಿದೆ.

ಹೊರೆಕಾಣಿಕೆ ಸಮರ್ಪಣೆ
ಬೆಂಜನಪದವು ಕೆನರಾ ಎಂಜಿನಿ ಯರಿಂಗ್‌ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವೃಂದದವರು ಪಾದ ಯಾತ್ರೆಯ ಮೂಲಕ ಹೊರೆಕಾಣಿಕೆ ಸಮರ್ಪಿಸಿದರು. ಹಿತ್ತಾಳೆಯ ದೊಡ್ಡ ದೀಪ, ಆರತಿ, ರಜತ ಆರತಿಯನ್ನು ಇದರೊಂದಿಗೆ ಸಮರ್ಪಿಸಲಾಯಿತು. ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಕಾರ್ಯಕ್ರಮ ಸಂಯೋಜಕ ಆರ್‌. ನಾರಾಯಣ ಸ್ವಾಮಿ, ವಿದ್ಯಾರ್ಥಿ ಸಂಯೋಜಕ ಅಕ್ಷಯ್‌ ಕಾಮತ್‌, ಸತ್ಯನಾರಾಯಣ ಭಟ್‌, ಕಾಲೇಜಿನ ಆಡಳಿತಾ ಕಾರಿ ಎಂ. ಗಣೇಶ್‌ ಕಾಮತ್‌, ಮೆಕ್ಯಾನಿಕಲ್‌ ಡಾ| ಕೃಷ್ಣಪ್ರಭು, ಸಹಿತ ಸಹಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

ವಜ್ರಖಚಿತ ರಜತ ಕವಚ ಸಮರ್ಪಣೆ
ಶ್ರೀದುರ್ಗಾಪರಮೇಶ್ವರೀ ದೇವಿಗೆ ವಜ್ರಖಚಿತ ರಜತ ಕವಚವನ್ನು ಸಮರ್ಪಿಸಲಾಯಿತು. ಮಾಜಿ ಸಚಿವ ನಾಗರಾಜ್‌ ಶೆಟ್ಟಿ ನೇತೃತ್ವದ ತಂಡ ದೇವರಿಗೆ ಸಮರ್ಪಿಸಿದರು. ವಜ್ರದ ಮೂಗುತಿ, ಬಂಗಾರ ತಾಳಿ ಒಳಗೊಂಡ ಬೆಳ್ಳಿಯ ಮೂಗುತಿ, ಬೆಳ್ಳಿಯ ಪ್ರಭಾವಳಿ ಒಳಗೊಂಡಿದೆ. ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಯ ಮೂಲಕ ಸಮರ್ಪಿಸಲಾಯಿತು.

ಇಂದಿನ ಕಾರ್ಯಕ್ರಮಗಳು
ಬೆ. 11.30-12.30 ಕರ್ಣಾಟಕ ಸಂಗೀತ- ಅರ್ಚನಾ ಮತ್ತು ಸಮನ್ವಿ ಉಡುಪಿ, ಬೆ. 12.35-1 ಬಲೇ ತೆಲಿಪಾಲೆ ಪ್ರಶಂಸ ತಂಡ ಕಾಪು
ಮಧ್ಯಾಹ್ನ 1-2.25 ಹರಿಕಥೆ ಅನಘ ಪ್ರಸಾಸ್‌ ತುಮಕೂರು,
2.30-4 ಗಾನ ವೈಭವ ಸಂಯೋಜನೆ: ಪಟ್ಲ ಸತೀಶ್‌ ಶೆಟ್ಟಿ
5-6 ಭರತನಾಟ್ಯ- ಅಭಿಜ್ಞಾ ಭಟ್‌, ಗಂಜಿಮಠ, ರಾತ್ರಿ 7ರಿಂದ 9ರ ವ ರೆ ಗೆ ಸಂಗೀತ ರಸಸಂಜೆ,9ರಿಂದ -10ಕ್ಕೆ ಗಾನ ನೃತ್ಯ ಅಕಾಡೆಮಿ, ಮಂಗಳೂರು ಪ್ರಸ್ತುತಿ ನೃತ್ಯ ಸಂಗಮ, ಸಂಜೆ 6 ಗಂ. ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here