ಪೊಳಲಿ : ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಭಕ್ತರು ತಮ್ಮ ಭಕ್ತಿಯ ಪ್ರತೀಕ ವಾಗಿ ನೀಡಿದ ಹೊರೆಕಾಣಿಕೆಯು ಕ್ಷೇತ್ರದ ಉಗ್ರಾಣದಲ್ಲಿ ತುಂಬಿದ್ದು, ಇದರ ಜೋಡಣೆಯು ಅದ್ಭುತ ಎನಿಸುವಂತೆ ಅಚ್ಚುಕಟ್ಟಾಗಿದೆ.
30 ಸಾವಿರಕ್ಕೂ ಅಧಿಕ ಕ್ಷೇತ್ರಕ್ಕೆ ಈಗಾಗಲೇ 30 ಸಾವಿರಕ್ಕೂ ಅಧಿಕ ಕುಟುಂಬಗಳ ಹೊರೆಕಾಣಿಕೆ ತಲುಪಿದ್ದು, ಇನ್ನಷ್ಟು ಭಕ್ತರ ಹೊರೆಕಾಣಿಕೆ ತಲುಪಬೇಕಿದೆ. ಮಾ. 5ರಂದು
ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳ ಹೊರೆಕಾಣಿಕೆಯು ನೂರಾರು ವಾಹನಗಳ ಮೂಲಕ ಮೆರವಣಿಗೆಯಲ್ಲಿ ತಲುಪಿದ್ದು, ಮಾ. 8ರಂದು ಮಂಗಳೂರು ಭಾಗದ ಹೊರೆಕಾಣಿಕೆ ಆಗಮಿಸಲಿದೆ.
ಈಗಾಗಲೇ ಪೊಳಲಿ ಸುತ್ತಮುತ್ತಲ ಗ್ರಾಮಗಳು, ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮಗಳು, ಮೂಡುಬಿದಿರೆ, ಪುತ್ತೂರು ಭಾಗದ ಹೊರೆಕಾಣಿಕೆ ಕ್ಷೇತ್ರಕ್ಕೆ ಬಂದಿದ್ದು, ಮಾ. 10ರಂದು ಉಡುಪಿ ಶ್ರೀಕೃಷ್ಣ ಮಠದ ಹೊರೆಕಾಣಿಕೆ ಆಗಮಿಸಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಹೊರಜಿಲ್ಲೆಗಳ ಹೊರೆಕಾಣಿಕೆಯೂ ಆಗಮಿಸಲಿದೆ. ಮಾ. 4ರಂದು 12 ಸಾವಿರದಷ್ಟು ಭಕ್ತರು ಹಾಗೂ ಮಾ. 5ರಂದು 15 ಸಾವಿರದಷ್ಟು ಭಕ್ತರು ಹೊರೆಕಾಣಿಕೆ ಸಮರ್ಪಿಸಿ ಪ್ರಮಾಣ ಪತ್ರ ಹಾಗೂ ಪ್ರಸಾದ ಪಡೆದಿದ್ದಾರೆ.
ಸ್ವಯಂಸೇವಕರ ನೋಂದಣಿ ಭಕ್ತರಿಂದ ಆಗಮಿಸುವ ಹೊರೆಕಾಣಿಕೆ ಗಳನ್ನು ಇಳಿಸಿ ಜೋಡಿಸುವುದಕ್ಕೆ ಈಗಾ ಗಲೇ 7ರಿಂದ 8 ಸಾವಿರ ಮಂದಿ ಸ್ವಯಂಸೇವಕರು ಹೆಸರು ನೋಂ ದಾಯಿಸಿಕೊಂಡಿದ್ದಾರೆ. ಉಗ್ರಾಣ ಹಾಗೂ ಪಾಕಶಾಲೆಯ ಉಗ್ರಾಣದಲ್ಲಿ ತಲಾ 75 ಮಂದಿಯ ತಂಡ ದುಡಿಯುತ್ತಿದೆ. ವಾಹನಗಳಿಂದ ಇಳಿಸುವುದಕ್ಕಾಗಿ 30 ಮಂದಿಯ 250 ಗಂಡಸರ ತಂಡ, 20 ಮಂದಿಯ 200 ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಎಲ್ಲಾ ಸ್ವಯಂಸೇವಕರ ಆಗಮನದ ಅನುಕೂಲಕ್ಕಾಗಿ ಪ್ರತಿಯೊಬ್ಬರ ಮೊಬೈಲ್ ಗೂ ಸಂದೇಶ ಕಳುಹಿಸುವ ವ್ಯವಸ್ಥೆ ಇದೆ. ಅದಕ್ಕಾಗಿಯೇ ಪ್ರತ್ಯೇಕ ಕಾಲ್ ಸೆಂಟರ್ ಕಾರ್ಯಚರಿಸುತ್ತಿದೆ.
ಸ್ವತ್ಛತೆಗೆ ಆದ್ಯತೆ ಕ್ಷೇತ್ರದಲ್ಲಿ ಸ್ವತ್ಛತೆಗೆ ವಿಶೇಷ ಅದ್ಯತೆ ನೀಡಲಾಗಿದ್ದು, ಮರೋಳಿ ಶ್ರೀ ಸೂರ್ಯನಾರಾಯಣ ಕ್ಷೇತ್ರದ ತಂಡ ಹಾಗೂ ಪತಂಜಲಿ ಯೋಗ ಶಿಕ್ಷಣ ತಂಡ ದುಡಿಯುತ್ತಿದೆ.