Home ಧಾರ್ಮಿಕ ಸುದ್ದಿ ತುಳುನಾಡಿನ ದೈವಗಳಿಗೆ ಪುದ್ವಾರ್‌ ನೇಮ

ತುಳುನಾಡಿನ ದೈವಗಳಿಗೆ ಪುದ್ವಾರ್‌ ನೇಮ

367
0
SHARE

ಪುತ್ತೂರು: ತುಳುನಾಡಿನಲ್ಲಿ ದೈವ ಗಳ ಆರಾಧನೆಗೆ ಮಹತ್ವದ ಸ್ಥಾನವಿದೆ. ಇಲ್ಲಿ ದೈವಗಳಿಗೂ ಪ್ರಕೃತಿಗೂ ನೇರವಾದ ಸಂಬಂಧ ವಿದೆ. ದೈವಕ್ಕೆ ಪುದ್ವಾರ್‌ (ಹೊಸ ಅಕ್ಕಿ) ನೇಮ ನಡೆಸುವ ವಿಶೇಷ ಸಂಸ್ಕೃತಿ ತುಳುನಾಡಿನಲ್ಲಿದೆ.

ತುಳುವರ ಬದುಕಿನಲ್ಲಿ ತಾವು ನಂಬುವ ದೈವಗಳಿಗೆ ಮೊದಲ ಮಣೆ. ಬದುಕಿನಂತೆ ದೈವಗಳನ್ನು ಕಾಣುವ, ದೈವಗಳ ನುಡಿ ಕೇಳಿಯೇ ತಮ್ಮ ಬದುಕನ್ನು ಸಾಗಿಸುವ ಹಳ್ಳಿ ಬದುಕಲ್ಲಿ ನೆಲೆ ನಿಂತ ದೈವಗಳಿಗೆ ತಾವು ಉಣ್ಣುವ ಆಹಾರಗಳನ್ನೇ ನೀಡಿ ಪೂಜಿಸುವ ಕ್ರಮವನ್ನೂ ಅಳವಡಿಸಿಕೊಂಡಿದ್ದಾರೆ.

ಅಡಿಕೆ, ಭತ್ತ, ರಬ್ಬರ್‌ ಹೀಗೆ ತಮ್ಮ ಕೃಷಿ ಬದುಕಿನ ನಡುವೆ ದೈವಗಳ ರಕ್ಷಣೆಯಲ್ಲಿ ನಾವು ಭದ್ರ ಎಂದು ನಂಬಿರುವ ತುಳುವರು ತಮ್ಮ ಪ್ರತಿಯೊಂದು ಕಾಯಕದಲ್ಲಿಯೂ
ದೈವಗಳನ್ನೇ ಮುಂದಿಟ್ಟು, ವರ್ಷಕ್ಕೊಮ್ಮೆ ಅಗೇಲು ನೀಡಿ ತಾವೂ ತೃಪ್ತರಾಗುತ್ತಾರೆ. ಕೆಲವರು ಪ್ರತಿ ವರ್ಷವೂ ತಾವು ನಂಬಿರುವ ದೈವಗಳಿಗೆ ನೇಮ ನಡೆಸಿ ಕೃತಾರ್ಥರಾಗುತ್ತಾರೆ. ಕೆಲವು ಕಡೆ ದೈವಗಳಿಗೆ ರಕ್ತಾಹಾರ ನೀಡುವ ಕ್ರಮವೂ ಇದೆ. ಅಗೇಲು ನೀಡುವಾಗ ಕೋಳಿ ಬಲಿ ಕೊಡುವುದುಂಟು. ಬಹುತೇಕ ಹಳ್ಳಿಗಳಲ್ಲಿ ಪ್ರತಿ ವರ್ಷ ಗ್ರಾಮ ದೈವಗಳಿಗೆ ನೇಮ ನಡೆಸುವ ತುಳುವರು ಪುದ್ವಾರ್‌ ಮೆಚ್ಚಿ ನೇಮವನ್ನೂ ದೈವಗಳಿಗೆ ಅರ್ಪಣೆ ಮಾಡುವ ಸಂಪ್ರದಾಯವಿದೆ.

ದೈವಕ್ಕೆ ಪುದ್ವಾರ್‌ ಏಣೇಲು ಭತ್ತದ ಕಟಾವು ನಡೆಸಿದ ಹಳ್ಳಿ ರೈತರು ತಮ್ಮ ಮನೆಯಲ್ಲಿ ಹೊಸ ಅಕ್ಕಿ ಪುದ್ವಾರ್‌ ಊಟ ಮಾಡುವುದು ಸಂಪ್ರದಾಯ. ತಾವು ಪುದ್ವಾರ್‌ ಉಣ್ಣುವ ಮೊದಲು ತಾವು ನಂಬುವ ದೈವಕ್ಕೆ ಪುದ್ವಾರ್‌ ನೀಡುವ ಭಕ್ತಿ ತುಳುವರ ದ್ದಾಗಿತ್ತು. ದೈವದ ಸೇವನೆಯ ಅನಂತರವೇ ತಾವು ಪುದ್ವಾರ್‌ ನಡೆಸುವ ಕ್ರಮವನ್ನು ಹಳ್ಳಿಗರು ಪಾಲಿಸುತ್ತಿದ್ದರು. ಇತ್ತೀಚೆಗೆ ಪುದ್ವಾರ್‌ ನೇಮ ವಿರಳವಾಗಿದೆ. ಪಡುವನ್ನೂರು ಗ್ರಾಮದ ಪಡು ಮಲೆ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಇಂತಹ ಒಂದು ಪುದ್ವಾರ್‌ ನೇಮ ನಡೆಯಿತು.

ದೈವಸ್ಥಾನದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಅಣಿಲೆ ರವಿರಾಜ ರೈ ಅವರ ನೇತೃತ್ವದಲ್ಲಿ ಈ ವಿಶಿಷ್ಟ ನೇಮವನ್ನು ನಡೆಸಲಾಯಿತು. ನಿಂತು ಹೋಗಿದ್ದ ಪುದ್ವಾರ್‌ ಮೆಚ್ಚಿ ನೇಮ
ಪುನರಾರಂಭಿಸುವ ಮೂಲಕ ಹಳ್ಳಿಯ ಮೂಲ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಾಗಿದೆ.

LEAVE A REPLY

Please enter your comment!
Please enter your name here