Home ಧಾರ್ಮಿಕ ಸುದ್ದಿ ಪುಚ್ಚಿಪ್ಪಾಡಿ: ವಾರ್ಷಿಕ ಜಾತ್ರೆ

ಪುಚ್ಚಿಪ್ಪಾಡಿ: ವಾರ್ಷಿಕ ಜಾತ್ರೆ

924
0
SHARE

ಪುಂಜಾಲಕಟ್ಟೆ: ಬಂಟ್ವಾಳ ತಾ| ಪಿಲಿಮೊಗರು ಗ್ರಾಮದ ಪೆಜಕ್ಕಳ, ಪುಚ್ಚಿಪ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ. 26ರಂದು ವಾರ್ಷಿಕ ಜಾತ್ರೆ ಜರಗಿತು.
ಶನಿಪೂಜೆ, ದೈವಗಳಿಗೆ ಪರ್ವ

ಬೆಳಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಪ್ರಧಾನ ಹೋಮ, ನವಗ್ರಹ ಹೋಮ, ಮಧ್ಯಾಹ್ನ ಹಾಲು ಪಾಯಸ ಸೇವೆ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಸಂಜೆ ಸಾರ್ವಜನಿಕ ಶನಿಪೂಜೆ, ದೈವಗಳಿಗೆ ಪರ್ವ, ಭಜನ ಮಂಗಲೋತ್ಸವ, ರಂಗಪೂಜೆ, ರಾತ್ರಿ ದೇವರ ಬಲಿ ಹೊರಟು ಉತ್ಸವ, ಕೆರೆಕಟ್ಟೆ ಉತ್ಸವ, ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಮಕ್ಕಳಿಂದ ನೃತ್ಯ, ವಿವಿಧ ಕಾರ್ಯಕ್ರಮ, ಬಳಿಕ ಶ್ರೀ ಕೃಷ್ಣ ಪಾರಿಜಾತ-ನರಕಾಸುರ ಮೋಕ್ಷ ಮೈಂದ ದ್ವಿವಿದರ ಕಾಳಗ ಯಕ್ಷಗಾನ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಆಡಳಿತ ಮೊಕ್ತೇಸರ ರಾಧಾಕೃಷ್ಣ ಕಕೃಣ್ಣಾಯ, ಭಜನ ಮಂಡಳಿ ಅಧ್ಯಕ್ಷ ಅರುಣ ಐತಾಳ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here