ಪಡುವನ್ನೂರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಭಂಡಾರತ್ತಡ್ಕ, ಸಾರಕೂಟೇಲು ಇದರ ವತಿಯಿಂದ ಗಣಪತಿ ಹೋಮ, ಶ್ರೀ ನಾಗಬ್ರಹ್ಮ, ರಕ್ತೇಶ್ವರಿ, ಗುಳಿಗ ತಂಬಿಲ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಜ.30ರಂದು ಭಂಡಾರತ್ತಡ್ಕ, ಸಾರಕೂಟೇಲು ಸಾನಿಧ್ಯದಲ್ಲಿ ನಡೆಯಿತು. ಬಳಿಕ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸುರೇಶ್ ಆಳ್ವ, ಪುಜಾ ಸಮಿತಿ ಅಧ್ಯಕ್ಷ ಕುಮಾರ್ ಅಂಬಟೆಮೂಲೆ, ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಪಾದೆಕರ್ಯ, ಉಪಾಧ್ಯಕ್ಷರಾದ ಮೋನಪ್ಪ ಪಿ ಪುಂಡಿಕಾಯಿ, ದೇವಕಿ, ಕಾರ್ಯದರ್ಶಿ ಜಯರಾಮ ಅಂಬಟೆಮೂಲೆ, ಜತೆ ಕಾರ್ಯದರ್ಶಿ ಸುಶಿಲಾ, ಲಲಿತಾ, ಕೋಶಾಧಿಕಾರಿ ರಮೇಶ್ ಅಂಬಟೆಮೂಲೆ, ಗೌರವ ಸಲಹೆಗಾರರಾದ ವಿಜಯ ಕುಮಾರ್ ಸೋಣಂಗೇರಿ, ಮಹಾಲಿಂಗೇಶ್ವರ ಭಟ್ ಪಟ್ಟಾಜೆ, ಪಡುಮಲೆ ಶಾಲಾ ಮುಖ್ಯ ಶಿಕ್ಷಕ ದೇವಿಪ್ರಸಾದ ಕೆ.ಸಿ., ಕಲಾವತಿ ಗೌಡ ಪಟ್ಲಡ್ಕ, ಚಿದಾನಂದ ಗೌಡ ಸಾರಕೂಟೇಲು, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲಾ ನಿವೃತ್ತ ಶಿಕ್ಷಕ ನಾಗಪ್ಪ ಗೌಡ ನಿವೃತ್ತ ಅರಣ್ಯ ಪಾಲಕ, ಚಿನ್ನಪ್ಪ ಗೌಡ, ಈಶ್ವರಮಂಗಲ, ಪೂಜಾ ಸಮಿತಿ ಸದಸ್ಯರು ಭಂಡಾರತ್ತಡ್ಕ ಶಿವಾಜಿ ಮಿತ್ರವೃಂದದ ಸದಸ್ಯರು, ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.