Home ಧಾರ್ಮಿಕ ಸುದ್ದಿ ಯುವ ಶಕ್ತಿಯಿಂದ ಧರ್ಮರಕ್ಷಣೆ: ಒಡಿಯೂರು ಶ್ರೀ

ಯುವ ಶಕ್ತಿಯಿಂದ ಧರ್ಮರಕ್ಷಣೆ: ಒಡಿಯೂರು ಶ್ರೀ

1727
0
SHARE

ನಗರ : ಗಡಿಯಲ್ಲಿ ದೇಶದ ರಕ್ಷಣೆಗೆ ಸೈನಿಕರು ಸಿದ್ಧರಾಗಿರುವ ರೀತಿ ಯಲ್ಲೇ ಹಳ್ಳಿಗಳಲ್ಲಿ ಯುವ ಶಕ್ತಿ ಧರ್ಮ ಸಂರಕ್ಷಣೆಗೆ ನಿಂತಾಗ ಒಳ್ಳೆಯ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು.

ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಸನ್ನಿಧಿಯಲ್ಲಿ ನಡೆದ ಶ್ರೀ ವಿಷ್ಣುಮೂರ್ತಿ ಭಜನ ಮಂಡಳಿಯ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಮತ್ತು 16ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಪ್ರೀತಿ ಮತ್ತು ಮಧುರತೆಯಿಂದ ಹೃದಯ ಕೂಡಿದ್ದರೆ ಉತ್ತಮ ಬದುಕು ಸಾಗಿಸಲು ಸಾಧ್ಯ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಾಯಂದಿರು ಜಾಗೃತರಾಗಬೇಕು. ಭಜನೆ ಹೊಸ್ತಿಲಲ್ಲಿ ದೀಪ ಇಟ್ಟಂತೆ. ಅದು ಮನೆಯ ಹೊರಗೆ ಮತ್ತು ಒಳಗೆ ಬೆಳಗುತ್ತದೆ ಎಂದರು.

ಒಂದುಗೂಡಿಸುವ ಕಾರ್ಯ

ಪರ್ಲಡ್ಕ ಎಸ್‌ಡಿಪಿ ರೆಮಿಡಿಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ನ ಆಡಳಿತ ನಿರ್ದೇಶಕ ಡಾ| ಹರಿಕೃಷ್ಣ ಪಾಣಾಜೆ ಮಾತನಾಡಿ, ಭಜನೆಯಿದ್ದಲ್ಲಿ ವಿಭಜನೆ ಇಲ್ಲ. ಸಮಾಜವನ್ನು ಒಂದುಗೂಡಿಸುವ ಕೆಲಸ ಭಜನೆಯಿಂದ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಜಯಂತ ನಡುಬೈಲು ಮಾತನಾಡಿ, ಮನುಷ್ಯನ ಸ್ವಾರ್ಥ ಮನೋಭಾವದಿಂದಾಗಿ ಸಮಾಜ ಎಲ್ಲೋ ದಾರಿ ತಪ್ಪುತ್ತಿದೆ. ತಂದೆ ತಾಯಿ ನಾವು ಕಾಣುವ ದೇವರು. ಅವರ ಮನಸ್ಸನ್ನು ನೋಯಿಸಿ ಎಷ್ಟು ಪೂಜೆ, ಪುನಸ್ಕಾರ ಮಾಡಿದರೂ ಫ‌ಲ ಸಿಗದು ಎಂದರು.

ಸಮ್ಮಾನ

ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತಿ ಹೊಂದಿದ ಮಾಜಿ ಯೋಧ ಸುಂದರ ಕೆ. ಹಾಗೂ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಪ್ರತಿವರ್ಷ ಪೈಂಟಿಂಗ್‌ ಕೆಲಸದಲ್ಲಿ ಸಹಕರಿಸುತ್ತಿರುವ ಗಣೇಶ್‌ ಅಂಬಟ ಅವರನ್ನು ಸಮ್ಮಾನಿಸಲಾಯಿತು.

ಭಜನ ಮಂಡಳಿಯ ಮಾಜಿ ಅಧ್ಯಕ್ಷ ಚೆನ್ನಪ್ಪ ಪೂಜಾರಿ, ಬಾಲಚಂದ್ರ ಅಂಚನ್‌, ಶೀನಪ್ಪ ನಾಯ್ಕ, ನವೀನ್‌ ಅಂಚನ್‌, ಬಾಲಕೃಷ್ಣ ಎಂ., ಮಾಧವ ಕೋಟ್ಯಾನ್‌, ರಮೇಶ್‌ ಅಂಚನ್‌, ನವೀನ್‌ ಕೋಟ್ಯಾನ್‌, ಗಣೇಶ್‌ ಸುವರ್ಣ, ಜಯರಾಮ ಬಿ.ಎನ್‌., ರಾಮ ಎಸ್‌., ಹರೀಶ್‌ ನಾಯ್ಕ, ಭರತ್‌ ಯು., ದೇವಿದಾಸ್‌, ಚಂದ್ರಹಾಸ್‌, ಪ್ರಸಾದ್‌ ಕುಮಾರ್‌ ಅವರನ್ನು ಗೌರವಿಸಲಾಯಿತು.

ವಿದ್ಯಾರ್ಥಿಗಳಾದ ರಕ್ಷಿತಾ, ಜಯ ಪ್ರಭಾ, ಪೂಜಾ, ನಿಖೀತಾ, ತೇಜಸ್ವಿನಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಪಘಾತದಿಂದ ಕಾಲಿಗೆ ಗಾಯವಾಗಿ ಚಿಕಿತ್ಸೆ ಪಡೆಯುತ್ತಿರುವ ದೀಕ್ಷಿತ್‌ ಕೋರಂಗು ಅವರಿಗೆ ಧನಸಹಾಯ ವಿತರಿಸಲಾಯಿತು.

ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನ ಮಂಡಳಿಯ ಗೌರವಾಧ್ಯಕ್ಷ ವಸಂತ ರೈ ಶಿಬರ, ಉದಯಗಿರಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ ಉಪಸ್ಥಿತರಿದ್ದರು.

ಸಿಂಧೂರಶ್ಮಿ ಮತ್ತು ಭಾಗ್ಯಶ್ರೀ ಪ್ರಾರ್ಥಿಸಿದರು. ಭಜನ ಮಂಡಳಿಯ ಅಧ್ಯಕ್ಷ ಸಂತೋಷ್‌ ಶೆಟ್ಟಿ ಪಂಜಳ ಸ್ವಾಗತಿಸಿದರು. ಕಾರ್ಯದರ್ಶಿ ಜಯ ರಾಮ ಬಿ.ಎನ್‌. ವಂದಿಸಿದರು.

ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮ ದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ಮೂಲ ನಂಬಿಕೆಯ ಮೇಲೆ ನಮ್ಮ ಅಧ್ಯಾತ್ಮ ನಿಂತಿದೆ. ಇತ್ತೀಚೆಗೆ ನಮ್ಮ ಕೆಲವೊಂದು ಆಚಾರ, ಕಟ್ಟುಪಾಡುಗಳನ್ನು ಮುರಿಯವ ಪ್ರಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸುವ ಕೆಲಸ ಆಗಬೇಕು. ಅದಕ್ಕೆ ನಾವೆಲ್ಲ ಸಂಘಟಿತರಾಗಬೇಕು. ಭಜನೆಯಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಅವರು ಹೇಳಿದರು.

ಸಾಮಾಜಿಕ ಪರಿವರ್ತನೆ
ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮ ದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ಮೂಲ ನಂಬಿಕೆಯ ಮೇಲೆ ನಮ್ಮ ಅಧ್ಯಾತ್ಮ ನಿಂತಿದೆ. ಇತ್ತೀಚೆಗೆ ನಮ್ಮ ಕೆಲವೊಂದು ಆಚಾರ, ಕಟ್ಟುಪಾಡುಗಳನ್ನು ಮುರಿಯವ ಪ್ರಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸುವ ಕೆಲಸ ಆಗಬೇಕು. ಅದಕ್ಕೆ ನಾವೆಲ್ಲ ಸಂಘಟಿತರಾಗಬೇಕು. ಭಜನೆಯಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here