Home ಧಾರ್ಮಿಕ ಸುದ್ದಿ ಶ್ರೀಕೃಷ್ಣಮಠದಲ್ಲಿ ಪ್ರೋಷ್ಠಪದಿ ಭಾಗವತ ಪಾರಾಯಣ

ಶ್ರೀಕೃಷ್ಣಮಠದಲ್ಲಿ ಪ್ರೋಷ್ಠಪದಿ ಭಾಗವತ ಪಾರಾಯಣ

1862
0
SHARE

ಉಡುಪಿ: ಭಾಗವತ ಪಾರಾಯಣ, ಪ್ರವಚನಕ್ಕೆ ಶ್ರೇಷ್ಠ ಸಮಯವೆಂದು ಪರಿಗಣಿತವಾದ ಭಾದ್ರಪದ ಮಾಸದಲ್ಲಿ ಶ್ರೀಕೃಷ್ಣಮಠದಲ್ಲಿ ಭಾಗವತ ಪಾರಾಯಣವನ್ನು ಆಯೋಜಿಸಲಾಗಿದೆ. ಭಾದ್ರಪದ ಮಾಸವು ಪ್ರೋಷ್ಠಪದಿ ಎಂದೂ ಕರೆಯಲ್ಪಡುತ್ತದೆ. ಈ ಪಕ್ಷದ ನವಮಿಯಿಂದ ಹುಣ್ಣಿಮೆಯವರೆಗೆ ಪರೀಕ್ಷಿತರಾಜನು ಶುಕಾಚಾರ್ಯರಿಂದ ಭಾಗವತವನ್ನು ಶ್ರಾವಣ ಮಾಡಿರುವ ಕಾರಣ ಇದಕ್ಕೆ ಮಹತ್ವ ಬಂದಿದೆ.

ಶ್ರೀಕೃಷ್ಣನ ಸನ್ನಿಧಿಯಲ್ಲಿ ಸೆ. 9ರಿಂದ 25ರವರೆಗೆ ಪ್ರೋಷ್ಠಪದಿ 16 ದಿನಗಳಲ್ಲಿ ನಡೆಯಲಿದೆ. ಈ ದಿನಗಳಲ್ಲಿ ಸಂಪೂರ್ಣ ಭಾಗವತ ಪಾರಾಯಣವನ್ನು ಮಾಡಲಾಗುವುದು. ಸೇವಾರೂಪದಲ್ಲಿ ನಡೆಸಲು ಅವಕಾಶವಿದ್ದು ಮುಂಬೈನ ಬಿ.ರಮಾನಂದ ರಾವ್‌ ಅವರು ತಮ್ಮ ಮನೆಯ ಐವರು ಸದಸ್ಯರ ಹೆಸರಿನಲ್ಲಿ ಸೇವೆಯನ್ನು ಕಾದಿರಿಸಿ ಪರ್ಯಾಯ ಶ್ರೀಪಲಿಮಾರು ಶ್ರೀಪಾದರಿಂದ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here