ಬೆಳ್ಮಣ್: ಕಾರ್ಕಳ ತಾಲೂಕಿನ ಪಳ್ಳಿ ಶ್ರೀಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾ ಪರಮೇಶ್ವರೀ ದೇವೀ ಸನ್ನಿಧಿಯ ಶ್ರೀ ದೇವರ ಮೂಲಸ್ಥಾನದಲ್ಲಿ ಶ್ರೀ ದೇವರ ನೂತನ ಪ್ರಾಸಾದ ಪ್ರತಿಷ್ಠೆ, ನಾಗಬಿಂಬ ಪ್ರತಿಷ್ಠೆ, ವಿವಿಧ ಧಾರ್ಮಿಕ ಅನುಷ್ಠಾನಗಳು, ಶ್ರೀ ನಾಗದೇವರ ಸನ್ನಿ ಯಲ್ಲಿ ಆಶ್ಲೇಷಾಬಲಿ, ವಿವಿಧ ಹೋಮಾದಿ ಅನುಷ್ಠಾನಗಳು, ಮಹಾಪೂಜೆ, ನಾಗಸಂದರ್ಶನ, ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮ ಕುಂಭಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ಗುರುವಾರ ನಡೆಯಿತು.
ಶ್ರೀಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಮೃಗೇಶ್ ಭಟ್ ಲಕ್ಷ್ಮೀಪುರ ಮತ್ತು ಮೇದಮೂರ್ತಿ ದಯಾನಂದ ಭಟ್ ಕಲ್ಲಡ್ಕ ಇವರ ನೇತೃತ್ವದಲ್ಲಿ ಕ್ಷೇತ್ರದ ವೈದಿಕರಿಂದ ನಡೆದ ಈ ಧಾರ್ಮಿಕ ಕೈಂಕರ್ಯದಲ್ಲಿ ನೂರಾರು ಸಂಖ್ಯೆ ಯಲ್ಲಿ ಶ್ರೀಕ್ಷೇತ್ರದ ಭಗವದ್ಭಕ್ತರು ಪಾಲ್ಗೊಂಡರು.