ಬಂಟ್ವಾಳ : ಒಂದು ವರ್ಷದಿಂದ ವಾಸ್ತವ್ಯ ಧರ್ಮ ಗುರುಗಳಾಗಿ ಪಾಲ್ದನೆಯ ಸಂತ ತೆರೆಜಾ ಚರ್ಚ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಳೂರು ಧರ್ಮಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ| ವಾಲ್ಟರ್ ಡಿ’ಮೆಲ್ಲೊ ಅವರನ್ನು ಬಂಟ್ವಾಳದ ಮೊಡಂಕಾಪು ಬಾಲ ಯೇಸು ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಬಿಷಪ್ ಅವರು ನೇಮಿಸಿದ್ದು, ಸೆ. 26ರಂದು ಅವರು ಅಧಿಕಾರ ಸ್ವೀಕರಿಸಿದರು.
ಧರ್ಮಪ್ರಾಂತದ ಪ್ರತಿನಿಧಿ ವಂ| ಹೆನ್ರಿ ಸಿಕ್ವೇರ ಅವರಿಂದ ಧರ್ಮಪ್ರಾಂತದ ವಿಕಾರ್ ಜನರಲ್ ಮ್ಯಾಕ್ಸಿಂ ನೊರೋನ್ಹಾ ಅವರ ಸಮಕ್ಷಮ ಪ್ರಾರ್ಥನ ವಿಧಿಗಳೊಂದಿಗೆ ಅವರು ಅಧಿಕಾರ ವಹಿಸಿಕೊಂಡರು.
ಪಾಲ್ದನೆಯ ಸಂತ ತೆರೆಜಾ ಚರ್ಚ್ನ ಧರ್ಮಗುರು ವಂ| ವಿನ್ಸೆಂಟ್ ವಿಕ್ಟರ್ ಮಿನೇಜಸ್, ಎಪಿಸ್ಕೋಪಲ್ ವಿಕಾರ್ ವಾರ್ ವಂ| ಜೆ.ಬಿ. ಕ್ರಾಸ್ತಾ, ಮೊಡಂಕಾಪು ಚರ್ಚ್ನ ಸಹಾಯಕ ಗುರು ವಂ| ಅಶ್ವಿನ್ ಕ್ರಾಸ್ತಾ ಮತ್ತಿತರರಿದ್ದರು.