Home ಧಾರ್ಮಿಕ ಸುದ್ದಿ ಮಳೆ, ಪ್ರವಾಹ ಶಾಂತವಾಗಲು ದೇವರಿಗೆ ಮೊರೆ

ಮಳೆ, ಪ್ರವಾಹ ಶಾಂತವಾಗಲು ದೇವರಿಗೆ ಮೊರೆ

731
0
SHARE

ಸುಬ್ರಹ್ಮಣ್ಯ : ಮಳೆ ಹಾಗೂ ಪ್ರವಾಹದಿಂದ ನಾಡಿನಲ್ಲಿ ನಡೆಯುತ್ತಿರುವ ಅನಾಹುತಗಳು ಕಡಿಮೆಯಾಗಬೇಕು ಎಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇಗುಲ‌ದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಹಾಗೂ ಕಾರ್ತಿಕ ಪೂಜೆ, ದೀಪಾರಾಧನೆ ನಡೆಸಲಾಯಿತು.

ನಾಡಿನ ವಿವಿಧೆಡೆ ಮಳೆ ಹಾಗೂ ಗಾಳಿಯಿಂದ ಹಾನಿಯಾಗುತ್ತಿದೆ. ಇದರಿಂದ ಜನತೆ ಸಂಕಷ್ಟ ಅನುಭವಿಸುತ್ತಿದು ಅನೇಕರು ನಿರಾಶ್ರಿತರಾಗಿದ್ದಾರೆ. ಇದೀಗ ದೇವರ ಮೊರೆ ಹೋಗಿ ಎಲ್ಲ ಅಬ್ಬರಗಳನ್ನೂ ತಗ್ಗಿಸಿ ಎಂದು ವೇ|ಮೂ| ವೆಂಕಟ್ರಮಣ ಭಟ್‌ ಮಂಜಳಗಿರಿ ಹಾಗೂ ವೇ|ಮೂ| ಕೇಶವ ಜೋಯಿಸ್‌ ಅವರು ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿದರು.

ಆ. 26: ವರುಣ ಯಜ್ಞ
ಆ. 26ರಂದು ವರುಣ ಜಪ, ರುದ್ರಪಾರಾಯಣ, ವರುಣ ಯಜ್ಞ ಮೊದಲಾದ ಕಾರ್ಯಕ್ರಮಗಳನ್ನು ಲೋಕ ಕಲ್ಯಾಣಾರ್ಥವಾಗಿ ನಡೆಸಲು ನಿರ್ಧರಿಸಲಾಯಿತು. ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಹೊಸೋಳಿಕೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್‌ ವಳಲಂಬೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸರೋಜಿನಿ ಮುಳುಗಾಡು, ಕೋಮಲ ಮುತ್ಲಾಜೆ, ಅರ್ಚಕ ಮಹಾಬಲೇಶ್ವರ ಭಟ್‌, ಗುತ್ತಿಗಾರು ವಲಯ ಹವ್ಯಕ ಪರಿಷತ್ತು ಅಧ್ಯಕ್ಷ ಸೀತಾರಾಮ ಭಟ್‌ ಅಡಿಕೆಹಿತ್ಲು, ಕಾರ್ಯದರ್ಶಿ ಸೂರ್ಯನಾರಾಯಣ ಪುಚ್ಚಪ್ಪಾಡಿ, ಪ್ರಮುಖರಾದ ಎಂ.ಜಿ. ಸತ್ಯನಾರಾಯಣ ಮೊಗ್ರ, ವೇ| ಮೂ| ವೆಂಕಟ್ರಮಣ ಭಟ್‌ ಮಂಜಳಗಿರಿ, ವೇ| ಮೂ| ಕೇಶವ ಜೋಯಿಸ್‌ ಕರುವಜೆ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್‌ ವಳಲಂಬೆ, ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ್‌ ದಂಬೆಕೋಡಿ, ಸುಬ್ರಹ್ಮಣ್ಯ ಭಟ್‌ ಜೀರು¾ಖೀ, ಮಾಧವ ಮೂಕಮಲೆ, ಶ್ರೀಕೃಷ್ಣ ಭಟ್‌ ಗುಂಡಿಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here