Home ಧಾರ್ಮಿಕ ಕಾರ್ಯಕ್ರಮ ಪ್ರತಿಷ್ಠಾ ವರ್ಧಂತಿ, ನವಚಂಡಿಕಾಯಾಗ

ಪ್ರತಿಷ್ಠಾ ವರ್ಧಂತಿ, ನವಚಂಡಿಕಾಯಾಗ

1901
0
SHARE

ಕುಂದಾಪುರ : ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ, ಪರಿವಾರ ದೇವರಿಗೆ ರಜತ ಕವಚ ಸಮರ್ಪಣೆ, ನವಚಂಡಿಕಾ ಯಾಗ, ಬ್ರಹ್ಮಕಲಶೋತ್ಸವವು ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಶ್ರೀಗಳ ಅನುಗ್ರಹದೊಂದಿಗೆ ವೇ|ಮೂ| ಕೆ. ಚಂದ್ರಶೇಖರ ಸೋಮಯಾಜಿ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.

ಗಣಯಾಗ, ಸತ್ಯನಾರಾಯಣ ಪೂಜೆ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಸಪ್ತಶತಿ ಪಾರಾಯಣ, ಪರಿವಾರ ದೇವರಿಗೆ ರಜತ ಕವಚ ಸಮರ್ಪಣೆ, ಬ್ರಹ್ಮಕಲಶಾಭಿಷೇಕ, ನವಚಂಡಿಕಾಯಾಗ ಅನ್ನ ಸಂತರ್ಪಣೆ, ರಾತ್ರಿ ಹೂವಿನ ಪೂಜೆ, ರಂಗ ಪೂಜೆ ಜರಗಿತು.

ದೇವಸ್ಥಾನದ ಪ್ರಧಾನ ಅರ್ಚಕ ಗಣಪತಿ ಸುವರ್ಣ, ಜಲಜಾ ಸುವರ್ಣ, ಉತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಹೇರಿಕುದ್ರು, ಅಧ್ಯಕ್ಷ ಪ್ರಕಾಶ್‌ ಕೆ.ಬಿ., ಚಂದ್ರ, ಶ್ವೇತಾ, ಭಗವದ್ಗೀತಾ ಅಭಿಯಾನ ಸಮಿತಿ ಸದಸ್ಯರು, ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here