Home ಧಾರ್ಮಿಕ ಸುದ್ದಿ ಪ್ರತಿಷ್ಠಾ ವರ್ಧಂತಿ, ಜಾತ್ರೆ ಸಂಪನ್ನ

ಪ್ರತಿಷ್ಠಾ ವರ್ಧಂತಿ, ಜಾತ್ರೆ ಸಂಪನ್ನ

1380
0
SHARE

ಬೆಳ್ತಂಗಡಿ: ಉಜಿರೆ ಗ್ರಾಮದ ಕಿರಿಯಾಡಿಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ರವಿವಾರ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಬೆಳಗ್ಗೆ ಗಣಪತಿ ಹೋಮ, ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಸಿಡಿಮುಡಿ ಗಂಧ ಪ್ರಸಾದ, ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಮುಂಡತ್ತೋಡಿ ಚಾವಡಿಯ ಶ್ರೀ ಕೃಷ್ಣ ಭಜನ ಮಂಡಳಿಯಿಂದ ಭಜನೆ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಬಳಿಕ ದೈವಗಳ ನೇಮದೊಂದಿಗೆ ಜಾತ್ರಾ ಮಹೋತ್ಸವ ಸಮಾಪನಗೊಂಡಿತು.

ಶ್ರೀ ನಿಲೇಶ್ವರ ಆಲಂಬಾಡಿ ವಾಸು ದೇವ ತಂತ್ರಿಗಳ ನಿರ್ದೇಶನದಲ್ಲಿ, ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಅನಂತರಾಮ ಕಾರಂತ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ವಿಧಿ- ವಿಧಾನಗಳು ನೆರವೇರಿತು.

ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ವಾಸುದೇವ ಸಂಪಿಗೆತ್ತಾಯ, ಆಡಳಿತ ಸಮಿತಿಯ ಅಧ್ಯಕ್ಷ ಕೆ.ವಿ. ಹೊಳ್ಳ, ಕಾರ್ಯದರ್ಶಿ ನಿರಂಜನ, ಸಮಿತಿಯ ಸದಸ್ಯರು, ಶ್ರೀ ಉಮಾಮಹೇಶ್ವರ ಭಜನ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ನಿನ್ನಿಕಲ್ಲು, ಕಾರ್ಯದರ್ಶಿ ವಿಘ್ನೇಶ್‌ ಧರಣಿ, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಜನಪದ ವೈಭವ

ಶನಿವಾರ ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ವೈವಿಧ್ಯ, ರಾಜ್ಯ ಪ್ರಶಸ್ತಿ ವಿಜೇತ ಜಯರಾಂ ಕೆ. ಮುಂಡಾಜೆ ನಿರ್ದೇಶನದಲ್ಲಿ ಜನಪದ ವೈಭವ ನಡೆಯಿತು. ಶಿಕ್ಷಕಿ ಸೇವಂತಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here