ಬೆಳ್ಳಾರೆ: ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ, ಭಕ್ತ ಜನರ ಶ್ರೇಯಸ್ಸಿಗಾಗಿ ವರ್ಷಂಪ್ರತಿಯಂತೆ ಉದ್ಭವ ಶ್ರೀ ಜಲದುರ್ಗಾ ದೇವಿ ಪ್ರೀತ್ಯರ್ಥವಾಗಿ ಚಂಡಿಕಾ ಹೋಮ, ಶ್ರೀ ಉದ್ಭವ ಮಹಾಗಣಪತಿ ದೇವರ ಪ್ರೀತ್ಯರ್ಥ 108 ನಾಳಿಕೇರ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ 108 ತೆಂಗಿನ ಕಾಯಿ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಬಿಂಬ ಶುದ್ಧಿ, ಪಂಚ ವಿಂಶತಿ ಕಲಶ ಪೂಜೆ, ಹೋಮದ ಪುರ್ಣಾಹುತಿ,
ಸುವಾಸಿನಿ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಪಂಚ ವಿಂಶತಿ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಟಾರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಭೋಜರಾಜ ಶೆಟ್ಟಿ, ಮಹಾಲಿಂಗ
ನಾಯ್ಕ, ದೇವಕಿ ಪೂವಪ್ಪ ಪೂಜಾರಿ, ಕಿಶೋರ್ ಕುಮಾರ್, ಲೀಲಾವತಿ ಶೆಟ್ಟಿ, ಅಂಗಾರ ಬಜ, ಕರುಣಾಕರ ಗೌಡ, ನೂರಾರು ಭಕ್ತರು ಭಾಗವಹಿಸಿದರು.