ಮಹಾನಗರ: ಕಾವೂರು ಮಂಜಲಕಟ್ಟೆ ಶ್ರೀ ಕೋರªಬ್ಬು ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಗುರುವಾರ ದೇರೆಬೈಲು ಬ್ರಹ್ಮಶ್ರೀ ವಿಟ್ಠಲದಾಸ ತಂತ್ರಿಯವರ ನೇತೃತ್ವದಲ್ಲಿ ನೆರವೇರಿತು.
ಬೆಳಗ್ಗೆ 7ರಿಂದ ದೈವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭ ವಾಯಿತು. ಬೆಳಗ್ಗೆ 8.40ಕ್ಕೆ ದೈವಗಳ ನೂತನ ಪೀಠ ಪ್ರತಿಷ್ಠೆ, ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ಬಬ್ಬುಸ್ವಾಮಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಅನ್ನ ಸಂತರ್ಪಣೆ ನಡೆಯಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವದ ವೈಭವದ ನೇಮ ನಡೆಯಿತು.
ಮಾಲಾಡಿ ಅಜಿತ್ ಕುಮಾರ್ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ, ಗಿರಿಜಾತೆ ಆರ್. ಭಂಡಾರಿ ಕಾವೂರುಗುತ್ತು, ಶ್ರೀನಿವಾಸ್ಮೂರ್ತಿ ರಾಯರಮನೆ, ಮಮತಾ ಡಿ. ಶೆಟ್ಟಿ ಕಾವೂರುಗುತ್ತು, ಸುಧಾಕರ ಶೆಟ್ಟಿ ಕಾವೂರುಗುತ್ತು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಎನ್. ಪೂಜಾರಿ, ಮಂಜುನಾಥ ಪ್ರಭು, ನಾರಾಯಣ ಆಚಾರ್ಯ ಕೊಂಬೋಡಿಬೆಟ್ಟು, ರಾಮಚಂದ್ರ ಪೂಜಾರಿ ಭಂಡಾರಮನೆ, ಶ್ರೀನಿವಾಸ್ ದುಗ್ಗನಮನೆ, ಶ್ರೀಧರ್ ಎಂ. ಪದ್ಮ ಗುರಿಕಾರ ಮುಲ್ಲಕಾಡು ಮೊದಲಾದವರು ಉಪಸ್ಥಿತರಿದ್ದರು.
ಎ. 4ರಂದು ಸಂಜೆ 4 ಗಂಟೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆಯನ್ನು ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಆಸ್ರಣ್ಣ ಉದ್ಘಾಟಿಸಿದರು.
ಕೆ.ಸಿ. ಆಳ್ವ ನೆತ್ತಿಲ ಬಾಳಿಕೆ ಎಕ್ಕರಾಡಿ ಅಧ್ಯಕ್ಷತೆ ವಹಿಸಿದ್ದು ಹಲವು ಗಣ್ಯರು ಭಾಗವಹಿಸಿದ್ದರು. ಸಂಜೆ 5ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತು ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.