Home ಧಾರ್ಮಿಕ ಸುದ್ದಿ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿಷ್ಠಾ ಮಹೋತ್ಸವ

ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿಷ್ಠಾ ಮಹೋತ್ಸವ

154
0
SHARE

ಕಲ್ಲಾರೆ ಎ. 19: ಇಲ್ಲಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನೆಯ 41ನೇ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ ಪೂಜೆ, ಪುಣ್ಯಾಹ ವಾಚನಪೂರ್ವಕ ಪವಮಾನ ಹೋಮ, ಪ್ರಧಾನ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆಯ ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು.

ಸಂಜೆ ಭಜನ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಮಹಾಪೂಜೆ, ರಥೋತ್ಸವ, ಪಲ್ಲಕಿ ಉತ್ಸವಾದಿಗಳು ನಡೆದು ಪ್ರಸಾದ ವಿತರಣೆ ನಡೆಯಿತು.

ಪ್ರಧಾನ ಅರ್ಚಕ ಎ. ರಾಘವೇಂದ್ರ ಉಡುಪ ನೇತೃತ್ವದಲ್ಲಿ ಪೂಜಾ ವಿಧಿ- ವಿಧಾನಗಳು ನಡೆದವು. ಗುರುರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ಯು. ಪೂವಪ್ಪ, ಟ್ರಸ್ಟಿಗಳಾದ ಎನ್‌. ಸುಬ್ರಹ್ಮಣ್ಯಂ, ಬೆಟ್ಟ ಈಶ್ವರ ಭಟ್, ಲೋಕೇಶ್‌ ಹೆಗ್ಡೆ, ಕೆ. ವಾಸುದೇವ ಶೆಣೈ, ಗಣಪತಿ ನಾಯಕ್‌ ಪಾಲ್ಗೊಂಡರು.

LEAVE A REPLY

Please enter your comment!
Please enter your name here