ಹೊಸಬೆಟ್ಟು : ನವವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು, ಶ್ರೀ ಗುರು ರಾಘವೇಂದ್ರ ಮಠದಲ್ಲಿ 21ನೇ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಇದೇ ಸಂದರ್ಭ ಆನಂದ ಪಿ.ಎಚ್., ಸಭಾ ವೇದಿಕೆಯನ್ನು ಅರ್ಪಣೆ ಮಾಡಿದ ಸಂದರ್ಭ ಗೌರವಿಸಲಾಯಿತು. ಹರಿದಾಸ ಎಚ್.ವಾದೀಶಾಚಾರ್, ರಾಘವೇಂದ್ರ ಎಚ್.ವಿ., ಹರಿಕೃಷ್ಣ ಸಾಲ್ಯಾನ್, ಬಂಟ್ವಾಳ ಮೋನಪ್ಪ ಗೌಡ, ಬಿ. ರಮೇಶ್ ರಾವ್, ಬಿ.ಜಿ. ರಾವ್, ಶ್ರೀನಿವಾಸ ಆಚಾರ್, ನಾಗರಾಜ ರಾವ್, ಐ. ಜಿತೇಂದ್ರಿಯ, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.