Home ಧಾರ್ಮಿಕ ಸುದ್ದಿ ಶರವೂರು ದುರ್ಗಾಪರಮೇಶ್ವರಿ ದೇವಿಗೆ ಪ್ರಭಾವಳಿ ಸಮರ್ಪಣೆ

ಶರವೂರು ದುರ್ಗಾಪರಮೇಶ್ವರಿ ದೇವಿಗೆ ಪ್ರಭಾವಳಿ ಸಮರ್ಪಣೆ

465
0
SHARE

ಆಲಂಕಾರು : ಸೀಮೆಯ ಸಮಸ್ತ ಭಕ್ತರ ದೇಣಿಗೆಯಿಂದ ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಮೂಲ ಪ್ರತಿಮೆಗೆ ಸಮರ್ಪಿಸುವ ಬೆಳ್ಳಿಯ ಪ್ರಭಾವಳಿಯನ್ನು ಮಂಗಳವಾರ ಆಲಂಕಾರು ಪೇಟೆಯಿಂದ ಭವ್ಯ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಯಿತು.

ಪ್ರಭಾವಳಿಯನ್ನು ಸಾಯಂಕಾಲ ಪೂಜಾ ವಿಧಿವಿಧಾನ ಮೂಲಕ ಸಮರ್ಪಿಸಲಾಯಿತು. ಮೆರವಣಿಗೆ ಸಂದರ್ಭ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಮಲಾಕ್ಷ ರೈ,
ಸದಸ್ಯರಾದ ಕರಿಯ ಗಾಣಂತಿ, ಉಮೇಶ್‌ ದೇವಾಡಿಗ, ಗುರುಪ್ರಸಾದ್‌ ರೈ, ಮೀನಾಕ್ಷಿ, ಆನಂದ ಅಗತ್ತಾಡಿ, ನಿವೃತ್ತ ಪ್ರಾಂಶುಪಾಲ ವಿಠಲ ರೈ, ಹಿಂಜಾವೇ ಆಲಂಕಾರು ಘಟಕಾಧ್ಯಕ್ಷ ಜನಾರ್ದನ ಗೌಡ ಕಯ್ಯಪೆ, ಗೌರವಾದ್ಯಕ್ಷ ಜಯಂತ ನೆಕ್ಕಿಲಾಡಿ, ಸಂಚಾಲಕ ಧನಂಜಯ, ಹಿಂಜಾವೇ
ಕಡಬ ತಾಲೂಕು ಪ್ರಖಂಡ ಮುಖಂಡ ಲ್ಲೇಶ್‌ ನಗ್ರಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here