Home ಧಾರ್ಮಿಕ ಸುದ್ದಿ ‘ಪರಶುರಾಮ ಸೃಷ್ಟಿಯ ಮಣ್ಣಲ್ಲಿ ನಾಗ ಶಕ್ತಿ ಅಗಾಧ’

‘ಪರಶುರಾಮ ಸೃಷ್ಟಿಯ ಮಣ್ಣಲ್ಲಿ ನಾಗ ಶಕ್ತಿ ಅಗಾಧ’

1289
0
SHARE
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಆಲಂಕಾರು : ಕಡಬ ತಾಲೂಕಿನ ಆಲಂಕಾರು ಗ್ರಾಮದ ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಮತ್ತು ಶ್ರೀ ಉಳ್ಳಾಕ್ಲು ದೈವಗಳ ಕ್ಷೇತ್ರದಲ್ಲಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ನಡೆದ ನಾಗ ತನುತರ್ಪಣ ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ
ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಭಾಗವಹಿಸಿದರು.

ಈ ಸಂದರ್ಭ ಆಶೀರ್ವಚನ ನೀಡಿದ ಸ್ವಾಮೀಜಿ, ತುಳುನಾಡಿನಲ್ಲಿ ನಾಗದೇವರನ್ನು ವಿಶಿಷ್ಟವಾಗಿ ಆಚರಿಸುವ ಪರಂಪರೆ ಇದೆ. ನಾಗ ಶಕ್ತಿ ಪರುಶುರಾಮ ಸೃಷ್ಟಿಯ ಮಣ್ಣಿನಲ್ಲಿ
ಅಗಾಧವಾಗಿದೆ. ನಾಗದೇವರನ್ನು ಭಕ್ತಿ ಶ್ರದ್ಧೆಗಳಿಂದ ಆರಾಧಿಸಿದರೆ ನಾಡು ಸುಭೀಕ್ಷೆಯಾಗಿರುತ್ತದೆ ಎನ್ನುವುದಕ್ಕೆ ನಮ್ಮ ಕರಾವಳಿ ಸಾಕ್ಷಿಯಾಗಿದೆ ಎಂದರು.

ವೇ| ಮೂ| ಸುಬ್ರಹ್ಮಣ್ಯ ಬಳ್ಳಕ್ಕುರಾಯ ನಾಗತನುತರ್ಪಣ ಸೇವೆ ನಡೆಸಿ ಕೊಟ್ಟರು. ಈ ಸಂದರ್ಭ ಆಡಳಿತ ಪ್ರಮುಖರಾದ ಈಶ್ವರ ಗೌಡ, ಸೂರಪ್ಪ ಪೂಜಾರಿ, ಸಂಕಪ್ಪ ಗೌಡ, ಅನಂತರಾಮ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here