Home ಧಾರ್ಮಿಕ ಸುದ್ದಿ ಪೊರ್ಕೋಡಿ: ತೋರಣ, ಉಗ್ರಾಣ ಮುಹೂರ್ತ

ಪೊರ್ಕೋಡಿ: ತೋರಣ, ಉಗ್ರಾಣ ಮುಹೂರ್ತ

990
0
SHARE

ಪೊರ್ಕೋಡಿ: ಇಲ್ಲಿನ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಾ. 26ರಿಂದ ಎ. 1ರವರೆಗೆ ನಡೆಯ ಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ಬೆಳಗ್ಗೆ ಎಡಪದವು ರಾಧಾ ಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು ತೋರಣ ಹಾಗೂ ಉಗ್ರಾಣ ಮುಹೂರ್ತ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್‌, ಕಾರ್ಯಾಧ್ಯಕ್ಷ ಡಾ| ಜಯರಾಮ ಶೆಟ್ಟಿ ಬಜಪೆ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕಾನ, ಕೋಶಾಧಿಕಾರಿ ಸುರೇಶ್‌ ಶೆಟ್ಟಿ ಅರೆಕಲ್ಲು, ಪದ್ಮನಾಭ ರಾವ್‌ ಮೇಲ್ಮನೆ ಪೇಜಾವರ, ಪ್ರಧಾನ ಅರ್ಚಕ ಕೃಷ್ಣ ಕುಮಾರ್‌, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೇಖರ ಅಮೀನ್‌, ನಾಗೇಶ್‌ ಕೆ. ಸಫಲಿಗ, ಸುರೇಂದ್ರ ಪೆರ್ಗಡೆ
ಪಾದೆಮನೆ, ಬ್ರಹ್ಮಕಲಶೋತ್ಸವ ಸಮಿತಿ ಯ ಶ್ರೀಕರ ಶೆಟ್ಟಿ ತೋಕೂರುಗುತ್ತು, ಸುಕೇಶ್‌ ಶೆಟ್ಟಿ ಮುಂಡಾರುಗುತ್ತು, ರವಿ ಆಳ್ವ ಚಿಕ್ಕಪರಾರಿ, ಸುದರ್ಶನ ಕಯ್ಯ ಮೇಗಿನ ಮನೆ, ದಿನೇಶ್‌ ಶೆಟ್ಟಿ  ಚಿಕ್ಕಪರಾರಿ, ನಿತಿನ್‌ ಶೆಟ್ಟಿ ಚಿಕ್ಕಪರಾರಿ, ಶ್ರೀಧರ್‌ ಪಿ.ಕುಂದರ್‌ ತಂದೆಕೆರೆ, ರಾಜು ಶೇನವ ಮೇಗಿನಮನೆ, ರಂಜಿತ್‌ ಶೆಟ್ಟಿ ಪಾದೆಮನೆ, ರಾಜೇಶ್‌ ಅಮೀನ್‌ ಬಾರಿಂಜ, ದೇಜಪ್ಪ ಶೆಟ್ಟಿ ಚಾವಡಿದಡಿ, ನಾರಾಯಣ ಶೆಟ್ಟಿ ಗಂಪಮನೆ, ರವಿರಾಜ್‌ ಆಚಾರ್‌ ಬಜಪೆ, ಸುಧಾಕರ ಶೆಟ್ಟಿ ಗುಡ್ಡೆಮನೆ, ಪ್ರಶಾಂತ್‌ ಶೆಟ್ಟಿ ಪಾದೆಮನೆ, ನವೀನ್‌ ಶೆಟ್ಟಿ ತಂದೆಕೆರೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here