Home ಧಾರ್ಮಿಕ ಸುದ್ದಿ ಪೊಳಲಿ ರಾಜರಾಜೇಶ್ವರೀ, ಪರಿವಾರ ದೇವರಿಗೆ ಬ್ರಹ್ಮಕಲಶಾಭಿಷೇಕ ಸಂಪನ್ನ

ಪೊಳಲಿ ರಾಜರಾಜೇಶ್ವರೀ, ಪರಿವಾರ ದೇವರಿಗೆ ಬ್ರಹ್ಮಕಲಶಾಭಿಷೇಕ ಸಂಪನ್ನ

1182
0
SHARE

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ, ದುರ್ಗಾ ಪರಮೇಶ್ವರೀ ಮತ್ತು ಸಪರಿವಾರ ದೇವ ರಿಗೆ ಮಾ. 13ರ ಬೆಳಗ್ಗೆ 4ರಿಂದ ಮೀನ ಲಗ್ನ ಸುಮುಹೂರ್ತದಲ್ಲಿ ಪುಣ್ಯಾಹ, ಗಣ ಹೋಮ ನಡೆಸಿ ಬೆಳಗ್ಗೆ 7.40ರಿಂದ 8.10ರ ಬ್ರಹ್ಮಕಲಶಾಭಿಷೇಕವು ವೈದಿಕ ವಿ ಧಿ ವಿಧಾನ ದೊಂದಿಗೆ ಶಾಸ್ತ್ರೋಕ್ತವಾಗಿ ನಡೆಯಿತು. ಬ್ರಹ್ಮಶ್ರೀ ವೇ|ಮೂ| ಸುಬ್ರಹ್ಮಣ್ಯ ತಂತ್ರಿ, ಬ್ರಹ್ಮಶ್ರೀ ವೇ|ಮೂ| ನರಸಿಂಹ ತಂತ್ರಿ, ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯರು ನೇತೃತ್ವ ವಹಿಸಿದ್ದರು.

ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆ ನಡೆ ಯು ತ್ತಿ ದ್ದಂತೆ ಮಾತೆ ಶ್ರೀದೇವಿ ಸಾûಾತ್‌ ಮಧುಮಗಳಂತೆ ಶೋಭಿಸುವುತ್ತಿರುವು ದನ್ನು ಕಂಡ ಭಕ್ತರು ಉಘೇ ಉಘೇ ಎಂದು ಜಯಕಾರ ಹಾಕಿದರು. ಶ್ರೀ ರಾಜ ರಾಜೇಶ್ವರೀಯನ್ನು ಕುಂಕುಮ ಬಣ್ಣದ ಪೀತಾಂಬರ ಸೀರೆಯಿಂದ, ವಜ್ರ ವೈಢೂರ್ಯ ಆಭರಣಗಳಿಂದ ಶೃಂಗರಿಸ ಲಾಗಿತ್ತು. ಶ್ರೀದೇವಿಯ ಈ ಪುಣ್ಯ ಕಾರ್ಯ ವನ್ನು ಕಣ್ತುಂಬಿ ಕೊಳ್ಳಲು ಜನ ರು ಸಾಗರೋ ಪಾದಿ ಯಲ್ಲಿ ದೇವಸ್ಥಾನದತ್ತ ಸಾಗಿಬಂದರು. ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ರಾಜ ರಾಜೇಶ್ವರೀ ಅಮ್ಮನವರಿಗೆ ಬ್ರಹ್ಮ ಕಲಶಾಭಿಷೇಕ ದೊಂದಿಗೆ ಸಂಪನ್ನವಾಗು ತ್ತಿದ್ದಂತೆ ಗುರುವಾರ ರಾತ್ರಿ ಧ್ವಜಾ ರೋಹಣ ದೊಂದಿಗೆ ಪೊಳಲಿಯ ಒಂದು ತಿಂಗಳ ಜಾತೆಯ ವೈಭವ ಆರಂಭವಾಗಲಿದೆ.

“ಬ್ರಹ್ಮ’ ಎಂದರೆ ಪರಿಪೂರ್ಣ
“ಬ್ರಹ್ಮ’ ಎಂದರೆ ಶಾಸ್ತ್ರದಲ್ಲಿ ಪರಿಪೂರ್ಣ ಎಂದರ್ಥ. ಬ್ರಹ್ಮಕಲಶದಲ್ಲಿ ಎಲ್ಲ ದೇವರನ್ನು ಏಕಸ್ವರೂಪದ ಆವಾಹನೆ ಮಾಡುತ್ತೇವೆ. ಇಂಥ ಬ್ರಹ್ಮಕಲಶ, ನಿತ್ಯಪೂಜೆ, ವಿಶೇಷ ಪೂಜೆ ಎಲ್ಲಿ ಮಾಡುತ್ತೇವೆಯೋ ಅಲ್ಲಿ ಸಾನ್ನಿಧ್ಯ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಮೂರ್ತಿಯಲ್ಲಿ ಸಾನ್ನಿಧ್ಯ ಬರಬೇಕಿದ್ದರೆ ಇಂಥ ಪೂಜಾಕ್ರಮಗಳು ವಿ ಧಿವತ್ತಾಗಿ ನಡೆಯಬೇಕು. ಆವಾಗಲೇ ಆ ದೇವರು ಭಕ್ತರ ಬೇಡಿಕೆಗಳಿಗೆ ಕೃತಾರ್ಥರಾಗುತ್ತಾರೆ.
– ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು, ತಂತ್ರಿಗಳು ಪೊಳಲಿ

LEAVE A REPLY

Please enter your comment!
Please enter your name here