ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ರವಿವಾರ ನಡೆದ ಪ್ರತಿಷ್ಠಾ ಅಷ್ಠಬಂಧ ಹಾಗೂ ನೂತನ ಧ್ವಜಪ್ರತಿಷ್ಠಾ ಕಾರ್ಯಕ್ರಮಕ್ಕೆ ಎಲ್ಲಡೆಯಿಂದಲೂ ಜನಸಾಗರವೇ ಹರಿದು ಬಂದಿತು.
ಕ್ಷೇತ್ರದ ಮೂಲೆ ಮೂಲೆಗಳಲ್ಲೂ ಭಕ್ತರ ಜನಸಂದಣಿ ಕಂಡುಬಂದು, ಪಾರ್ಕಿಂಗ್ ಪ್ರದೇಶ, ಬಸ್ ನಿಲ್ದಾಣಗಳೂ ಪೂರ್ತಿ ತುಂಬಿದ್ದವು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟ ಕಡುಶರ್ಕರ ಲೇಪನದ ಮೃಣ್ಮಯ ಮೂರ್ತಿಯನ್ನು ಕಂಡು ಪುನೀತರಾದರು.
1.70 ಲಕ್ಷಕ್ಕಿಂತಲೂ ಅಧಿಕ ಮಂದಿ
ಅಂಕಿಅಂಶದ ಪ್ರಕಾರ 1.70 ಲಕ್ಷಕ್ಕಿಂತಲೂ ಅಧಿಕ ಮಂದಿ ದೇವರ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಊಟೋಪಹಾರ ಸೇವಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿಯು ಲಕ್ಷಕ್ಕೂ ಹೆಚ್ಚು ಭಕ್ತರನ್ನು ನಿರೀಕ್ಷಿಸಿದ ಪರಿಣಾಮ ಆಗಮಿಸಿದ ಎಲ್ಲರಿಗೂ ಅನ್ನಪ್ರಸಾದ ನೀಡಲು ಅನುಕೂಲವಾಯಿತು. ಸುಮಾರು 15 ಸಾವಿರಕ್ಕೂ ಅಧಿಕ ವಾಹನಗಳ ಪಾರ್ಕಿಂಗ್ ಪ್ರದೇಶ ತುಂಬಿತ್ತು. ಜತೆಗೆ ಪೊಳಲಿಗೆ ಆಗಮಿಸುವ ಎಲ್ಲ ಬಸ್ಸುಗಳಲ್ಲೂ ಪ್ರಯಾಣಿಕರ ಸಂಖ್ಯೆ ವಿಪರೀತ ಏರಿಕೆಯಾಗಿತ್ತು.