Home ಧಾರ್ಮಿಕ ಸುದ್ದಿ ಪೊಳಲಿ ದೇವಸ್ಥಾನ: ತುಲಾಭಾರ ಹರಕೆ ಸಲ್ಲಿಕೆ

ಪೊಳಲಿ ದೇವಸ್ಥಾನ: ತುಲಾಭಾರ ಹರಕೆ ಸಲ್ಲಿಕೆ

1019
0
SHARE

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಜಾತ್ರೆಯ ನಿಮಿತ್ತ ತುಲಾಭಾರ ಸೇವೆ ದಿನ ನೂರಾರು ಭಕ್ತರು ಹರಕೆ ಸಲ್ಲಿಸಿದರು. ಪ್ರತೀವರ್ಷ ಅವಭೃಥ ಸ್ನಾನ(ಆರಡ) ದಿನದಂದು ತುಲಾಭಾರ ಸೇವೆಗೆ ಅವಕಾಶ ಇತ್ತು. ಆದರೆ ಇದೀಗ ಭಕ್ತರ ಅನುಕೂಲಕ್ಕಾಗಿ ದಂಡಮಾಲೆಯ ದಿನದಂದು ತುಲಾಭಾರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಭಕ್ತರು ಹರಕೆಯ ರೂಪದಲ್ಲಿ ಬೆಲ್ಲ, ಅಕ್ಕಿ, ಸೀಯಾಳ, ತೆಂಗಿನಕಾಯಿ, ಹೂವು, ಹಿಂಗಾರದಲ್ಲಿ ತುಲಾಭಾರ ಸೇವೆ ಸಲ್ಲಿಸಿ ಕೃತಾರ್ಥರಾದರು.
ದೇಗುಲದ ಅರ್ಚಕರು ದೇವಿಗೆ ಹಾಕುವ ಚಿನ್ನಾಭರಣಗಳನ್ನು ಹರಕೆ ಹೊತ್ತ ಭಕ್ತರ ಕೊರಳಿಗೆ ಹಾಕಿ ತೂಕದಲ್ಲಿ ಕುಳ್ಳಿರಿಸಿ ತೂಕ ಮಾಡಿದರು. 20 ಮಂದಿ ಭಕ್ತರು ಸೇವೆ ಸಲ್ಲಿ ಸಿ ದ ರು. ದೇಗುಲದ ಅರ್ಚಕರು ಹಾಗೂ ಸಿಬಂದಿ ತುಲಭಾರ ಸೇವೆಯಲ್ಲಿ ಸಹಕರಿಸಿದರು.

ದೇಗುಲದಲ್ಲಿ ತುಲಾಭಾರ ಹರಕೆ ಸಲ್ಲಿಕೆಗೆ ಈ ವರ್ಷದಿಂದ ಭಕ್ತರ ಅನುಕೂಲಕ್ಕಾಗಿ ಬದಲಾವಣೆ ಮಾಡ ಲಾಗಿದ್ದು, ಮಾ. 24, ಮಾ.29, ಎ. 3, ಎ. 12 ರಂದು ತುಲಾಭಾರ ಸೇವೆ ನಡೆಯಲಿದೆ.

LEAVE A REPLY

Please enter your comment!
Please enter your name here