ಪೊಳಲಿ: ಇಲ್ಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ಸಮರ್ಪಿಸಿದ ಕೊಡಿಮರವನ್ನು (ಧ್ವಜಸ್ತಂಭ) ಸೋಮವಾರ ಬೆಳಗ್ಗೆ 8.30ಕ್ಕೆ ದೇಗುಲದ ಆವರಣದಲ್ಲಿ ವಾಸ್ತು ಶಿಲ್ಪಿ ಮುನಿಯಂಗಳರವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿದಿವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಲಾಯಿತು.
ಈ ವೇಳೆ ದೇಗುಲದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ ತಂತ್ರಿ, ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ ಭಟ್, ಪರಮೇಶ್ವರ ಭಟ್, ವಿಷ್ಣುಮೂರ್ತಿ ನಟ್ಟೋಜ ಚೇರ ಹಿಮಕರ ರಾವ್, ಮಾಧವ ಮಯ್ಯ, ದೇಗುಲದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ರಾಜೇಶ ನಾಯಕ್ ಉಳಿಪಾಡಿಗುತ್ತು, ರಮಾನಾಥ ರೈ, ನಾಗರಾಜ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಕೃಷ್ಣರಾಜ್ ಮಾರ್ಲ, ವಿದ್ಯಾಚರಣ್ ಶೆಟ್ಟಿ, ಸೋಮಶೇಖರ್ ಶೆಟ್ಟಿ, ಸುಬ್ರಾಯ ಕಾರಂತ,ಸಂಪತ್ ಕುಮಾರ್ ಶೆಟ್ಟಿ, ವೆಂಕಟೇಶ ನಾವಡ, ಚಂದ್ರ ಶೇಖರ ಭಂಡಾರಿ, ಎಂಜಿನಿಯರ್ ರಿತೇಶ್ ಮತ್ತು ಗಿತೇಶ್ ಹಾಗೂ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಪುರುಷ ಎನ್. ಸಾಲ್ಯಾನ್, ಬಳ್ಳಿ ಚಂದ್ರಶೇಖರ, ಗೋಪಾಲಕೃಷ್ಣ ಕೈಕಂಬ, ಉಮೇಶ್ ಪೂಜಾರಿ ಬಾರಿಂಜ, ಜಯಾನಂದ ಅಂಚನ್, ನಾರಾಯಣ ಎಂ ಅಮ್ಮುಂಜೆ, ರಾಜು ಕೋಟ್ಯಾನ್, ಯಶವಂತ ಕೋಟ್ಯಾನ್, ಭುವನೇಶ್ ಪಚಿನಡ್ಕ, ಚಂದಪ್ಪ ಅಂಚನ್ ಮಜಿಲಗುತ್ತು, ಗಿರಿಧರ ಶೆಟ್ಟಿ, ಉದ್ಯಮಿ ಗಂಗಾಧರ ಪೂಜಾರಿ ಕೊಪ್ಪಲ, ಗಣೇಶ ಪೂಜಾರಿ, ಸದಾಶಿವ ಕರ್ಕೇರ ಕಾಜಿಲ, ರಾಮಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.