ಪೊಳಲಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿರುವ ಶ್ರೀ ಕ್ಷೇತ್ರಪಾಲ ದೈವದ ಮರದ ದಿವ್ಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಗುರುವಾರ ಶ್ರೀಕ್ಷೇತ್ರಕ್ಕೆ ತರಲಾಯಿತು.
ಮೂಡುಬಿದಿರೆಯ ಕಲ್ಲಮುಣ್ಕೂರಿನಲ್ಲಿ ಪೂಜಾಕೈಂಕರ್ಯಗಳನ್ನು ನೆರವೇರಿಸಿ ಕೈಕಂಬ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಪೊಳಲಿಗೆ ತರಲಾಯಿತು.
ಪ್ರಾರ್ಥನೆ ಸಲ್ಲಿಸಿದ ಬಳಿಕ ಮೂರ್ತಿಗಳನ್ನು ಗುಡಿಯಲ್ಲಿ ಇಡಲಾಯಿತು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕ್ಷೇತ್ರಪಾಲನ ಪ್ರತಿಷ್ಠಾಪನೆ ನಡೆಯಲಿದೆ.
ಮೂಡುಬಿದಿರೆ ಅಲಂಗಾರ್ನ ತಪೋವನದ ಸುಬ್ಬಣ್ಣ ಭಟ್ ಅಲಂಗಾರ್, ವಾಸುದೇವ ಭಟ್, ವಿವೇಕ್ ಪೈ, ಅಶೋಕ್ ಪೈ, ಗಣೇಶ್ ರಾವ್, ಸುಧೀಂದ್ರ ರಾವ್, ನವೀನ್ ಕೈಕಂಬ, ಸೋಹನ್ ಅಧಿಕಾರಿ, ಕಾಜಿಲ ಸದಾಶಿವ, ರಾಜೇಶ್ ಬಂಗೇರಾ, ಹರೀಶ್ ಮಟ್ಟಿ, ಸುಧಾಕರ್ ಕೊಳಂಬೆ, ಭಾಸ್ಕರ್ ಭಟ್, ಬಾಲಕೃಷ್ಣ ಪೊಳಲಿ, ವರುಣಾಕ್ಷ ಕೈಕಂಬ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್, ಮೊಕ್ತೇಸರರಾದ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ತಾರಾನಾಥ ಆಳ್ವ, ಮಾಧವ ಭಟ್ ಮತ್ತು ಅರ್ಚಕ ವೃಂದ, ಮೊದಲಾದ ಭಕ್ತರು ಉಪಸ್ಥಿತರಿದ್ದರು.
ಆರು ತಿಂಗಳ ಅವಧಿಯಲ್ಲಿ ಮುಣ್ಕೂರಿನಲ್ಲಿ ಮರದ ಕೆತ್ತನೆ ನಡೆದಿದ್ದು, ಶಿಲ್ಪಿಗಳಾದ ನಾರಾಯಣ ಆಚಾರ್ಯ ಹಾಗೂ ಹರೀಶ್ ಆಚಾರ್ಯ ಅವರು ಕೆತ್ತನೆ ನಡೆಸಿದ್ದಾರೆ.