Home ಧಾರ್ಮಿಕ ಸುದ್ದಿ ಪೊಳಲಿ: ನೂತನ ಕೊಡಿಮರದ ಪುಣ್ಯಕಲಶ

ಪೊಳಲಿ: ನೂತನ ಕೊಡಿಮರದ ಪುಣ್ಯಕಲಶ

969
0
SHARE

ಪೊಳಲಿ : ಜೀರ್ಣೋದ್ಧಾರ ಗೊಳ್ಳುತ್ತಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ನೂತನ ಕೊಡಿಮರದ ಸ್ಥಾಪನೆಯ ಪೂರ್ವಭಾವಿಯಾಗಿ ಪುಣ್ಯಾಹ ಕಲಶ, ಆಧಾರಶಿಲೆಗೆ ರತ್ನನ್ಯಾಸಪೂಜೆ ನೂರಾರು ಭಕ್ತರ ಸಮಕ್ಷಮದಲ್ಲಿ ಇತ್ತೀಚೆಗೆ ನಡೆಯಿತು. ದೇಗುಲದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್‌ ತಂತ್ರಿ ಪೂಜಾವಿಧಿ-ವಿಧಾನಗಳನ್ನು ನೆರವೇರಿಸಿದರು.

ದೇಗು ಲದ ಪ್ರ. ಅರ್ಚಕರಾದ ಮಾಧವ ಭಟ್‌, ಕೆ.ರಾಮ್‌ ಭಟ್‌, ಪರಮೇಶ್ವರ ಭಟ್‌, ವಿಷ್ಣುಮೂರ್ತಿ ನಟ್ಟೋಜ, ಮಾಧವ ಮಯ್ಯ, ಚೇರಾ ಹಿಮಕರ ರಾವ್‌ ಸಹಕರಿಸಿದರು.

ಈ ಸಂದರ್ಭ ವಾಸ್ತುಶಿಲ್ಪಿ ಮಹೇಶ ಮುನಿಯಂಗಳ, ಶಿಲ್ಪಿ ಕೃಷ್ಣ ಆಚಾರ್ಯ, ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ರಮಾನಾಥ ರೈ, ಧಾರ್ಮಿಕ ಪರಿಷತ್‌ಸದಸ್ಯ ಪದ್ಮನಾಭ ಕೊಟ್ಯಾನ್‌, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್‌, ಹರಿಕೃಷ್ಣ ಬಂಟ್ವಾಳ್‌, ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ಗಿರಿಧರ ಶೆಟ್ಟಿ, ವೆಂಕಟೇಶ್‌ ನಾವಡ, ಸುಬ್ರಾಯ ಕಾರಂತ, ಎಂಜಿನಿಯರ್‌ ರಿತೇಶ್‌, ಗಿತೇಶ್‌, ಬೇಬಿ ಪೂಜಾರಿ, ನೂತನಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಧ್ಯಕ್ಷ ರಾಮದಾಸ್‌ ಕೋಟ್ಯಾನ್‌ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌ ಪಚಿನಡ್ಕ, ಯಶವಂತ ಕೋಟ್ಯಾನ್‌, ರಾಮಪ್ಪ ಪೂಜಾರಿ, ಪ್ರಶಾಂತ್‌ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here