Home ಧಾರ್ಮಿಕ ಸುದ್ದಿ ಪೊಳಲಿ ಕ್ಷೇತ್ರ: ವಾರ್ಷಿಕ ಕಾಲಾವಧಿ ಜಾತ್ರೆ ಆರಂಭ 29 ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡಾ…!

ಪೊಳಲಿ ಕ್ಷೇತ್ರ: ವಾರ್ಷಿಕ ಕಾಲಾವಧಿ ಜಾತ್ರೆ ಆರಂಭ 29 ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡಾ…!

791
0
SHARE

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಕಾಲಾವಧಿ ಜಾತ್ರೆ ಮಹೋತ್ಸವವು ಮಾ. 15ರಂದು ಧ್ವಜಾರೋಹಣದಿಂದ ಪ್ರಾರಂಭಗೊಂಡು ಎಪ್ರಿಲ್‌ 12ರ ವರೆಗೆ ಒಟ್ಟು 29 ದಿನಗಳ ಕಾಲ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ.

ಪೊಳಲಿ ಜಾತ್ರೆಯ ದಿನನಿಗದಿಪಡಿಸುವ ವಿಶಿಷ್ಠ ಸಂಪ್ರದಾಯವಾಗಿರುವ ಕದ್ರ್ ಮುಡಿ ಏರಿಸಿ “ಕುದಿ’ ಕರೆಯಲಾಗಿದ್ದು, ದೈವಪಾತ್ರಿಯು “ಇರ್ವತ್ತೂಂರ್ಬ (29) ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡ…’ ಎಂದು ಜೋರಾಗಿ ಕೂಗಿ ಹೇಳಿದ್ದು ಈ ಮೂಲಕ ಈ ಬಾರಿ ಪೊಳಲಿಯಲ್ಲಿ ಎಷ್ಟು ದಿನಗಳ ಜಾತ್ರೆ ಇದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. “ಈ ಸರ್ತಿ 29 ದಿನ ಮುಗುಲಿ ಬೈದ್‌ಂಡ್‌.. ಅಪ್ಪೆ ಬಾರಿ ಕುಸಿಟ್‌ ಉಲ್ಲೆರ್‌ (ಈ ಬಾರಿ 29 ದಿನ ಬೆಸಸಂಖ್ಯೆ ಬಂದಿದೆ, ಮಾತೆ ಖುಷಿಯಲ್ಲಿದ್ದಾರೆ)’ ಎನ್ನುವ ಉದ್ಘಾರದ ಮೂಲಕ ಭಕ್ತರು ಸಂತಸ ವ್ಯಕ್ತಪಡಿಸಿದರು. ಪೊಳಲಿಯ ಬ್ರಹ್ಮಕಲಶೋತ್ಸವದ ಸವಿನೆನಪು ಹಸುರಾಗಿರುವಾಗಲೇ 29 ದಿನಗಳ ಅದ್ಧೂರಿ ಜಾತ್ರೆ ನಡೆಯಲಿರುವುದು ಸಮಸ್ತ ಭಕ್ತರ ಖುಷಿಯನ್ನು ಇಮ್ಮಡಿಗೊಳಿಸಿದೆ.

ಉಳಿಪ್ಪಾಡಿಗುತ್ತಿನಿಂದ ಭಂಡಾರ ಆಗಮನ ಗುರುವಾರ ರಾತ್ರಿ ನಂದ್ಯ ಕ್ಷೇತ್ರದಿಂದ ಮತ್ತು ಮಳಲಿ ಉಳಿಪ್ಪಾಡಿಗುತ್ತಿನಿಂದ ಭಂಡಾರ ಆಗಮಿಸಿತು. ಗುರುವಾರ ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ವಿಧ್ಯುಕ್ತವಾಗಿ ಜಾತ್ರೆ ಆರಂಭಗೊಂಡಿತು. ಕೊಡಿಬಲಿ ನಡೆದ ಬಳಿಕ ಮುಂಜಾವಿನ ವೇಳೆ ಕಂಚುಬೆಳಕು (ಕಂಚಿಲ್‌) ಸೇವೆ-ಬಲಿ ಉತ್ಸವ ನಡೆಯಿತು. ನೂರಾರು ಮಂದಿ ಕಂಚಿಲ್‌ ಸೇವೆಯ ಹರಕೆ ತೀರಿಸಿಕೊಂಡರು. ಕಂಚಿಲ್‌ನ ಬಳಿಕ ರಥೋತ್ಸವ ಜರಗಿತು.

ಮುನ್ನಾದಿನ ಪುತ್ತಿಗೆ ಸೋಮನಾಥ ದೇವಸ್ಥಾನಕ್ಕೆ ತೆರಳಿ ದಿನನಿಗದಿಗೆ ತೆರಳಲಾಗಿತ್ತು. ಬೆಳಗ್ಗೆ ಜೋಯಿಸರು ಹಿಂಗಾರದ ಸಿರಿಯನ್ನು ಹಿಡಿದು ದುರ್ಗಾಪರಮೇಶ್ವರಿ ಗುಡಿಯ ಬಳಿ ಬಂದು ವಾಲಗ ಊದುವ ಸೇರಿಗಾರರ ಬಳಿ ಜಾತ್ರೆ ದಿನಗಳ ಅವಧಿಯ ಬಗ್ಗೆ ಗುಟ್ಟಾಗಿ ಹೇಳಿದರು. ಪ್ರಮಾಣ ಬಾವಿಯ ಬಳಿ ಭಗವತೀ ದೇವಿಯ ಕದ್ರ್ ಮುಡಿ ಏರಿದ ಅನಂತರ ದೈವ ಪಾತ್ರಿಗಳು ಗೋಪುರದ ಬಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ತಮ್ಮ ವಿಧಿವಿಧಾನಗಳನ್ನು ಪೂರೈಸಿಕೊಂಡರು.

ಸೇರಿಗಾರರು ನಿಧಾನವಾಗಿ ಬರುತ್ತಿದ್ದಂತೆ ಸಭೆಯಲ್ಲಿ ಮೌನ ಆವರಿಸಿತ್ತು. ಸೇರಿಗಾರರು ಗುಟ್ಟಾಗಿ ದೈವ ಪಾತ್ರಿಯ ಕಿವಿಯಲ್ಲಿ ಹೇಳುತ್ತಿದ್ದಂತೆ ಭಕ್ತರು ದೈವದ ನುಡಿಗಾಗಿ ಕಾದು ನಿಂತಿದ್ದರು. ದೈವಪಾತ್ರಿಯು “29 ಪೋಪಿನಾನಿ ಸುಕ್ರಾರ ದಿನತ್ತಾನಿ ಆರಡ’ ಎನ್ನುತ್ತಿದ್ದಂತೆ ಜನರೆಲ್ಲಾ “ಬಾರೀ ಎಡ್ಡೆ ದಿನ ಬೈದುಂಡ್‌ (ಉತ್ತಮ ದಿನ ಬಂದಿದೆ) ಎನ್ನುವ ಉದ್ಘಾರ ತೆಗೆದು ಖುಷಿಪಟ್ಟರು.

ಒಟ್ಟು 29 ದಿನಗಳ ಜಾತ್ರೆಯಲ್ಲಿ ಮಾ. 19 ಮಂಗಳವಾರ, ಮಾ. 24 ರವಿ ವಾರ, ಮಾ.29 ಶುಕ್ರವಾರ, ಎಪ್ರಿಲ್‌ 3 ಬುಧವಾರದಂದು ದಂಡಮಾಲೋತ್ಸವ ನಡೆಯಲಿದೆ. ಕೋಳಿಗುಂಟ, ಐದು ದಿನಗಳ ಚೆಂಡು, ರಥೋತ್ಸವ, ಎ. 12 ಶುಕ್ರವಾರ ಅವಭೃಥ ಸ್ನಾನ ನಡೆಯಲಿದ್ದು, ಅಂದು ಬೆಳಗ್ಗೆ 8 ಗಂಟೆಯಿಂದ 10.30ರ ತನಕ ತುಲಾಭಾರ ಸೇವೆ ನಡೆಯಲಿದೆ. ಇದಲ್ಲದೆ ಜಾತ್ರೆ ಕೊನೆಗೊಂಡ ಮರುದಿನ ಕೊಡಮಣಿತ್ತಾಯಿ ಪರಿವಾರ ದೈವಗಳ ನೇಮ ಜರಗಲಿದೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here