ಪೊಳಲಿ : ಇಲ್ಲಿನ ಶ್ರೀ ರಾಜರಾಜೇಶ್ವರೀ ಅಮ್ಮನವರ 29 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದ್ದು, ಇದರ ಅಂಗವಾಗಿ ಶುಕ್ರವಾರ ರಾತ್ರಿ ಅವಭೃಥ ಸ್ನಾನ ಫಲ್ಗುಣಿ ನದಿಯ ಮಳಲಿಯ ಕಡಪುಕರಿಯ ಎಂಬಲ್ಲಿ ನಡೆಯಿತು.
ವಾಡಿಕೆಯಂತೆ ಬಲಿಸೇವೆ ನಡೆದು, ರಾತ್ರಿ ದೇವರ ಸವಾರಿ ಫಲ್ಗುಣಿ ನದಿಯಲ್ಲಿಗೆ ಜಳಕಕ್ಕೆ ಹೊರಡಲಾಯಿತು. ಜಳಕದ ಕೆರೆಯಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಗೆ
ಮಂಗಳ ಸ್ನಾನ ನಡೆಸಲಾಯಿತು. ಈ ವೇಳೆ ಆಯಾಯ ಪುಣ್ಯಸ್ಥಳಗಳಲ್ಲಿ ಕಟ್ಟೆಪೂಜೆ ನಡೆದವು.
ದೇವರ ಉತ್ಸವ ಮೂರ್ತಿಯ ಆಭರಣಗಳನ್ನು ಪಲ್ಲಕಿಯಲ್ಲಿ ಹೊತ್ತು ತರಲಾಯಿತು. ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಳಿಕ ಧ್ವಜಾವರೋಹಣ ನಡೆಸಲಾಯಿತು. ಬಳಿಕ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ನೇಮ ನಡೆಯಿತು. ಶನಿವಾರ ಕೊಡಮಣಿತ್ತಾಯಿ ದೈವದ ನೇಮ ಜರಗಿತು.