Home ಧಾರ್ಮಿಕ ಸುದ್ದಿ ಪೊಳಲಿ ಕ್ಷೇತ್ರ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಮೆರವಣಿಗೆ: ಪೂರ್ವಭಾವಿ ಸಭೆ

ಪೊಳಲಿ ಕ್ಷೇತ್ರ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಮೆರವಣಿಗೆ: ಪೂರ್ವಭಾವಿ ಸಭೆ

1441
0
SHARE

ಬಂಟ್ವಾಳ : ಪ್ರತೀ ಗ್ರಾಮ ಮಟ್ಟದಿಂದ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ಅಭೂತಪೂರ್ವ ರೀತಿಯಲ್ಲಿ ಮಾದರಿಯಾಗಿ ನಡೆದು ಕೊಳ್ಳಬೇಕು ಎಂದು ಕ್ಷೇತ್ರದ ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದರು.

ಅವರು ಬಿ.ಸಿ. ರೋಡ್‌ ರಂಗೋಲಿ ರಾಜಾಂಗಣದಲ್ಲಿ ನಡೆದ ಪೊಳಲಿ ಕ್ಷೇತ್ರದ ಹೊರೆಕಾಣಿಕೆ ಮೆರವಣಿಗೆ ಪೂರ್ವಭಾವಿ ಸ»ಯಲ್ಲಿ ಮಾತನಾಡಿ, ಮಾ. 5ರಂದು ಅಪರಾಹ್ನ 3ಕ್ಕೆ ಬಿ.ಸಿ. ರೋಡ್‌ ರಾ.ಹೆ. ಬ್ರಹ್ಮಶ್ರೀ ನಾರಾಯಣಗುರು ಮುಖ್ಯವೃತ್ತದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಸಂಪೂರ್ಣ ಪುನರ್‌ ನಿರ್ಮಾಣದೊಂದಿಗೆ ಶ್ರೀ ರಾಜರಾಜೇಶ್ವರಿ ಅಮ್ಮನವರ ಬ್ರಹ್ಮ ಕಲಶೋತ್ಸವ ನಡೆಯುತ್ತಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಮಾತನಾಡಿ, ಎಲ್ಲರೂ ಒಗ್ಗೂಡಿ ಹೊರೆಕಾಣಿಕೆ ಮೆರವಣಿಗೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ
ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಗ್ರಾಮ ಸಮಿತಿ ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ಭಕ್ತಿ ಶ್ರದ್ಧೆಯಿಂದ ಪ್ರತೀ ಮನೆಯಿಂದ ಎಲ್ಲರೂ ಪಾಲ್ಗೊಳ್ಳುವ ಮೂಲಕ ದೇವರ ಕಾರ್ಯದಲ್ಲಿ ಭಾಗಿಗಳಾಗೋಣ ಎಂದರು.
ಸಮಿತಿ ಸಂಚಾಲಕ ಚಂದ್ರಹಾಸ ಡಿ. ಶೆಟ್ಟಿ ಮಾತನಾಡಿ, ಕ್ಷೇತ್ರದ ಮಾಗಣೆ ಗ್ರಾಮಗಳಾದ ಪುದು, ಕೊಡ್ಮಾಣ್‌, ಅಮ್ಮುಂಜೆ, ಮೇರಮಜಲು ಗ್ರಾಮದಿಂದ ಮಾ. 4ರಂದು ಉಗ್ರಾಣ ಮುಹೂರ್ತಕ್ಕೆ ಹಸುರುವಾಣಿ ಸಮರ್ಪಣೆಯಾಗಲಿದೆ. ಮಾ. 5ರಂದು ತಾಲೂಕಿನ 84 ಗ್ರಾಮಗಳ ಭಕ್ತರು ಹೊರೆಕಾಣಿಕೆಯಲ್ಲಿ ದೀರ್ಘ‌ ಬಾಳಿಕೆ ಬರುವ ತರಕಾರಿ ಮತ್ತು ಟೈಗರ್‌ ಬ್ರ್ಯಾಂಡಿನ ಅಕ್ಕಿ ನೀಡುವಂತೆ ವಿನಂತಿಸಿಕೊಂಡರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಮೂಡುಶೆಡ್ಡೆ, ಸಾಮಾಜಿಕ ಕಾರ್ಯಕರ್ತ ಕೈಯೂರು ನಾರಾಯಣ ಭಟ್‌, ಬಿಜೆಪಿ ಜಿಲ್ಲಾ ವಕ್ತಾರ
ಕೆ. ಹರಿಕೃಷ್ಣ ಬಂಟ್ವಾಳ ಮತ್ತಿತರರು ವಿವಿಧ ಸಲಹೆ ನೀಡಿದರು.

ರಾಜ್ಯ ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್‌, ಜಿಲ್ಲಾ ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ರವೀಂದ್ರ ಕಂಬಳಿ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ, ಬಿಲ್ಲವ ಮುಖಂಡ ರಾಮದಾಸ್‌ ಕೋಟ್ಯಾನ್‌, ಉದ್ಯಮಿ ಭುವನೇಶ ಪಚ್ಚಿನಡ್ಕ, ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ ಅಮೂರು, ಪತ್ರಕರ್ತ ಮೋಹನ್‌ ಕೆ. ಶ್ರೀಯಾನ್‌ ರಾಯಿ, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಸದಾನಂದ ಡಿ. ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯ ಬ್ಯಾಂಕ್‌ ನಿವೃತ್ತ ಅಧಿಕಾರಿ ಬೇಬಿ ಕುಂದರ್‌ ಸ್ವಾಗತಿಸಿ, ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಡಿ.ಎಂ. ಕುಲಾಲ್‌ ವಂದಿಸಿದರು. ಬಾಲಕೃಷ್ಣ ಆಳ್ವ
ಕೊಡಾಜೆ ನಿರೂಪಿಸಿದರು.

LEAVE A REPLY

Please enter your comment!
Please enter your name here