ಪೊಳಲಿ: ಇಲ್ಲಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಒಂದು ತಿಂಗಳ ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ಬೆಳಗ್ಗಿನಿಂದಲೇ ತುಲಾಭಾರ ಸೇವೆ ನಡೆದಿದ್ದು, ಹಲವು ಭಕ್ತರು ತಮ್ಮ ಹರಕೆ ತೀರಿಸಿಕೊಂಡರು.
ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ರಾತ್ರಿ ಬಲಿ ಸೇವೆ ನಡೆದು ಫಲ್ಗುಣಿ ನದಿಯಲ್ಲಿ ಅವ ಭೃಥ ಸ್ನಾನದ ಬಳಿಕ ಧ್ವಜಾ ವರೋಹಣಗೊಂಡು 29 ದಿನಗಳ ಜಾತ್ರೆ ಸಂಪನ್ನಗೊಂಡಿದೆ.
ಅರ್ಕುಳ ಬೀಡಿನಿಂದ ಭಂಡಾರ ವರ್ಷಂಪ್ರತಿ ಜಾತ್ರೆಯ ಸಂದರ್ಭ ಪೂರ್ವಕಟ್ಟುಕಟ್ಟಲೆಗೆ ಅನು ಸಾರವಾಗಿ ಅರ್ಕುಳ ಬೀಡಿನಿಂದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಭಂಡಾರವು ಭವ್ಯ ಮೆರವಣಿಗೆಯೊಂದಿಗೆ ಶುಕ್ರವಾರ ದೇವಸ್ಥಾನಕ್ಕೆ ಆಗಮಿಸಿತು.
ಶೋಭಾಯಾತ್ರೆಯನ್ನು ಪೊಳಲಿ ದೇವಸ್ಥಾನದ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿಯವರು ಬರಮಾಡಿ ಕೊಂಡರು. ದೇವಸ್ಥಾನದ ಜಾತ್ರೆ ಸಂಪನ್ನಗೊಂಡ ಬಳಿಕ
ಉಳ್ಳಾಕ್ಲು ಮಗೃಂತಾಯಿ ದೈವಗಳ ನೇಮ ಜರಗಿತು. ಶನಿವಾರ ಕೊಡಮಣಿತ್ತಾಯಿ ದೈವದ ನೇಮ, ರವಿವಾರ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನೆರವೇರಲಿದೆ.