Home ಧಾರ್ಮಿಕ ಸುದ್ದಿ ಪೊಳಲಿ : ಬ್ರಹ್ಮಕಲಶೋತ್ಸವ ಸಂಭ್ರಮ ಮಹಾಬಲಿಪೀಠ, ಕ್ಷೇತ್ರಪಾಲ ಪ್ರತಿಷ್ಠೆ, ಮಹಾಪೂಜೆ

ಪೊಳಲಿ : ಬ್ರಹ್ಮಕಲಶೋತ್ಸವ ಸಂಭ್ರಮ ಮಹಾಬಲಿಪೀಠ, ಕ್ಷೇತ್ರಪಾಲ ಪ್ರತಿಷ್ಠೆ, ಮಹಾಪೂಜೆ

517
0
SHARE

ಪೊಳಲಿ : ಇಲ್ಲಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಹಲವು ವಿಧಿವಿಧಾನಗಳು ಪೂರ್ಣಗೊಂಡಿದ್ದು, ಸೋಮ ವಾರ ಪ್ರಾತಃಕಾಲದಿಂದ ಪುಣ್ಯಾಹ, ಗಣ ಹೋಮ, ರುದ್ರಯಾಗ, ಶಾಂತಿ ಪ್ರಾಯಶ್ಚಿತ್ತ, ಪ್ರೋಕ್ತ ಹೋಮಗಳು ನಡೆದವು. ಅನಂತರ ಮಹಾಬಲಿಪೀಠ ಪ್ರತಿಷ್ಠೆ ನಡೆಸಿ ಹೋಮಕಲಶಾಭಿಷೇಕ, ದೈವಗಳಿಗೆ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ಪೂರ್ಣಗೊಂಡಿತು. ಸಂಜೆ ಶ್ರೀಚಕ್ರ ಪೂಜೆ, ಕ್ಷೇತ್ರಪಾಲ ಪ್ರತಿಷ್ಠೆ, ಮಂಟಪ ಸಂಸ್ಕಾರ, ಮಂಡಲ ರಚನೆ, ಅಂಕುರ ಪೂಜೆ ನಡೆದು ಮಹಾಪೂಜೆ ಸಲ್ಲಿಸಲಾಯಿತು.

ಸಾಂಸ್ಕೃತಿಕ ಸಂಭ್ರಮ
ಬ್ರಹ್ಮಕಲಶೋತ್ಸವದ ಅಂಗವಾಗಿ ರವಿವಾರ ಹಲವಾರು ಸಾಂಸ್ಕೃತಿಕ  ವೈವಿಧ್ಯ ಮಯ ಕಾರ್ಯಕ್ರಮಗಳು ಭಕ್ತರಿಗೆ ಮನೋರಂಜನೆಯನ್ನು ಒದಗಿಸಿದವು. ರಾತ್ರಿ ನಡೆದ ಅಜಯ್‌ ವಾರಿಯರ್‌ ಮತ್ತು ಬಳಗ ಬೆಂಗಳೂರು ತಂಡ ಸಂಗೀತ ರಸಸಂಜೆಗೆ ಜನರು ಕಿಕ್ಕಿರಿದು ತುಂಬಿದ್ದರು. ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ನಿರ್ದೇ ಶನದಲ್ಲಿ ಮೂಡಿಬಂದ ಗಾನ ನೃತ್ಯ ಅಕಾಡೆಮಿ ಪ್ರಸ್ತುತಪಡಿಸಿದ ನೃತ್ಯ ಸಂಗಮ ಮನಮೋಹಕವಾಗಿತ್ತು.

ಸೋಮವಾರ ಜಾಗೋ ಹಿಂದೂಸ್ಥಾನಿ ಕಾರ್ಯಕ್ರಮ ಮೂಡಿಬಂದಿತು. ಇದ ರೊಂದಿಗೆ ಭಜನೆ, ಸಾಕ್ಸೋಫೋನ್‌ ವಾದನ, ಜುಗಲ್‌ಬಂದಿ, ಹರಿಕಥೆ ಭಕ್ತಿ ಪರವಶವಾಗಿಸಿದರೆ ದೀಪಕ್‌ ರೈ ತಂಡದ “ತೆಲಿಕೆ ಬಂಜಿ ನಿಲಿಕೆ’ ನಗೆಗಡಲಲ್ಲಿ ತೇಲಿಸಿತು. ಅಪ್ಪಗೆರೆ ತಿಮ್ಮರಾಜು ಮತ್ತು ಬಳಗ ಮೈಸೂರು ತಂಡದಿಂದ ರಂಗಗೀತೆ ಎನ್ನುವ ಜನಪದ ಗೀತೆಗಳು ಗಾನಲೋಕದಲ್ಲಿ ತೇಲಿಸಿದವು. ಇದರೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಹಲಸಿನಕಾಯಿಯ ಸ್ಪೆಷಲ್‌
ಪೊಳಲಿ ದೇವಸ್ಥಾನಕ್ಕೆ ಹೊರೆಕಾಣಿಕೆ ರೂಪದಲ್ಲಿ ಸಾಕಷ್ಟು ಹಲಸಿನಕಾಯಿ, ಸೌತೆಕಾಯಿ, ಚೀನಿಕಾಯಿ ಸಹಿತ ಹಲವಾರು ಬಗೆಯ ತರಕಾರಿ- ಗೆಡ್ಡೆಗೆಣಸುಗಳು ಹೆಚ್ಚಾಗಿ ಬಂದಿವೆ. ಇವು ಗಳಲ್ಲಿ ಹಲಸಿನಕಾಯಿ ಎಲ್ಲರಿಗೆ ಮೆಚ್ಚಿನದ್ದಾಗಿದೆ.

ಹೀಗಾಗಿ ಹಲಸಿನಕಾಯಿಯ ಏನಾದರೊಂದು ಸ್ಪೆಷಲ್‌ ಪ್ರತಿನಿತ್ಯ ಮಾಡಲಾಗುತ್ತಿದೆ. ಹಲಸಿನಕಾಯಿ ಪೋಡಿ, ವಡೆಯನ್ನು ಬಾಣಸಿಗರು ತಯಾರು ಮಾಡುತ್ತಿದ್ದು, ಸಾಂಬಾರ್‌, ಪಲ್ಯಗಳಲ್ಲಿ ಹೆಚ್ಚಾಗಿ ಇದನ್ನೇ ಬಳಸಲಾಗುತ್ತಿದೆ. ಹಲಸಿನಕಾಯಿಯನ್ನು ಸುಲಿದು ಅದರ ಸಿಳ್ಳುಗಳನ್ನು ಬೇರ್ಪಡಿಸಲೆಂದೂ ನೂರಾರು ಮಂದಿ ಮಹಿಳಾ ಸ್ವಯಂ ಸೇವಕರು ತೊಡಗಿಕೊಂಡಿದ್ದಾರೆ.

ಇಂದಿನ ಕಾರ್ಯಕ್ರಮಗಳು
ವೈದಿಕ: ಪ್ರಾತಃಕಾಲ 5ರಿಂದ ಪುಣ್ಯಾಹ, ಗಣಹೋಮ, ಚಂಡಿಕಾ ಹೋಮ, ಅದ್ಭುತ ಶಾಂತಿ, ಸ್ವಶಾಂತಿ, ಚೋರ ಶಾಂತಿ, ತಣ್ತೀಕಲಶ ಪೂಜೆ, ತಣ್ತೀಹೋಮ, ಹೋಮಕಲಶಾಭಿಷೇಕಗಳು, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ, ಸಂಜೆ 5ರಿಂದ ಶ್ರೀ ರಾಜರಾಜೇಶ್ವರಿ ದೇವರಿಗೆ ಪಂಚಶತಕಲಶ ಸಹಿತ ಬ್ರಹ್ಮಕಲಶಾ ವಾಸ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪಂಚಶತ ಕಲಶ ಸಹಿತ ಬ್ರಹ್ಮಕಲಶಾ ವಾಸ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ, ಶ್ರೀಶಾಸ್ತ ದೇವ ರಿಗೆ ಅಷ್ಟೋತ್ತರ ಶತ ಕಲಶ ಸಹಿತ ಬ್ರಹ್ಮಕಲಶಾ ವಾಸ, ಆಧಿವಾಸ ಹೋಮ, ಮಹಾಪೂಜೆ ನಡೆ ಯ ಲಿದೆ. ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆ ಯ ಲಿದೆ. ಸಾಂಸ್ಕೃತಿಕ: ಬೆಳಗ್ಗೆ ಎಂ. ಸುರೇಶ್‌, ಮೂಡುಬಿದಿರೆ ಮತ್ತು ಬಳಗದವ ರಿಂದ ಸ್ಯಾಕ್ಸೋಫೋನ್‌ ವಾದನ, 11.30ರಿಂದ ಫ್ಯೂಷನ್‌ ಸಂಗೀತ ವೈ.ಜಿ. ಶ್ರೀಲತಾ ಮತ್ತು ಬಳಗ ಮೈಸೂರು, 12.30ರಿಂದ ಕರ್ಣಾಟಕ ಸಂಗೀತ ಸಚಿತ್ರ ಹೊಳ್ಳ ಪುತ್ತೂರು, 1.30ರಿಂದ ತುಳು ಸಂಸ್ಕೃತಿ ಅನಾವರಣ-ಗುರುಪುರ ಬಂಟ ಮಾತೃ ಸಂಘ, 2.30ರಿಂದ ಭರತನಾಟ್ಯ-ಆಯನಾ ವಿ. ರಮಣ್‌ ಮತ್ತು ಮೋನಿಕಾ ರಾವ್‌, 3ರಿಂದ ಗೀತ ಗಾಯನ ಕವಿತಾ ಉಡುಪಿ ಮತ್ತು ಬಳಗ ಬೆಂಗಳೂರು, ರಾತ್ರಿ 7ರಿಂದ ಮಧುರ ಸಂಗೀತ- ಕಲಾವತಿ ದಯಾನಂದ ಉಡುಪಿ, 9- ನೃತ್ಯಾನ್ವೇಷನಂ: ನಿರ್ದೇಶನ: ಬಾಲಕೃಷ್ಣ ಮಂಜೇಶ್ವರ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here