Home ಧಾರ್ಮಿಕ ಸುದ್ದಿ ಪೊಳಲಿ ರಾಜರಾಜೇಶ್ವರೀ ದೇವಿಗೆ 300 ಗ್ರಾಂ ಸ್ವರ್ಣ  ಹಾರ ಸಮರ್ಪಣೆ

ಪೊಳಲಿ ರಾಜರಾಜೇಶ್ವರೀ ದೇವಿಗೆ 300 ಗ್ರಾಂ ಸ್ವರ್ಣ  ಹಾರ ಸಮರ್ಪಣೆ

1642
0
SHARE

ಪೊಳಲಿ : ಬಡವರಾಗಿದ್ದ ರಾಯಚೂರು ಸ್ಟೇಷನ್‌ ರೋಡ್‌ ನಿವಾಸಿ ಎಸ್‌.ಡಿ. ಸತೀಶ್‌ ಕುಮಾರ್‌ ಅವರು ಇಲ್ಲಿನ ದೇವರು ಅನುಗ್ರಹದಿಂದ ಶ್ರೀಮಂತರಾಗಿದ್ದರಿಂದ ದೇವಿಗೆ 300 ಗ್ರಾಂ ತೂಕದ ಚಿನ್ನದ ಆಭರಣವನ್ನು ಸಮರ್ಪಿಸಿದರು.

ಈ ಕುರಿತು ಮಾತನಾಡಿದ ಅವರು, 24 ವರ್ಷಗಳ ಮುಂಚೆ ರಾಯಚೂರಲ್ಲಿ ಅಪ್ಪನಿಗೆ ಗಿರಾಣಿ ಅಂಗಡಿ ಇತ್ತು. ನಮ್ಮ ತಂದೆ ದಿ| ಎಸ್‌.ಡಿ. ಈಶ್ವರಯ್ಯ ಅವರಿಗೆ ಐದು ಗಂಡು, ಒಬ್ಬರು ಹೆಣ್ಣು ಮಗಳಿದ್ದಾರೆ. ಜೀವನ ನಡೆಸುವುದೇ ಒಂದು ಕಷ್ಟ. 30 ವರ್ಷಗಳ ಮುಂಚೆ ನನ್ನ ಗೆಳೆಯನಾಗಿರುವ ಪೊಳಲಿ ರಾಧಾಕೃಷ್ಣ ರೈ ಅವರ ಮನೆಗೆ ಬಂದಿ ದ್ದಾಗ ಪೊಳಲಿ ದೇವಸ್ಥಾನದ ಕಾರಣಿಕದ ಬಗ್ಗೆ ತಿಳಿಸಿದರು.

ಪೊಳಲಿಗೆ ಆಗಮಿಸಿ ಶ್ರೀ ರಾಜರಾಜೇಶ್ವರೀ ದೇವಿಗೆ ಪ್ರಾರ್ಥನೆ ಸಲ್ಲಿಸಿ ಊರಿನಲ್ಲಿ ದೇವರ ಹೆಸರಲ್ಲೇ ಬ್ಯಾಂಕ್‌ ಸಾಲ ಮಾಡಿ ಒಂದು ಮೆಡಿಕಲ್‌ ಶಾಪ್‌ ತೆರೆದೆವು. ಪ್ರತಿದಿನ ದೇವರಲ್ಲಿ ಪ್ರಾರ್ಥಿಸಿ ಆದಾಯದಲ್ಲಿ ಶೇ. 10 ಅನ್ನು ದೇವರ ಹೆಸರಲ್ಲಿ ತೆಗೆದಿರುಸುತ್ತಿದ್ದೆವು. ವ್ಯಾಪಾರ ವೃದ್ಧಿಯಾದ ಮೇಲೆ ದೇವರ ಹೆಸರಲ್ಲಿ ದಿನಕ್ಕೆ 200ರಂತೆ ತೆಗೆದಿಟ್ಟು ಆ ಹಣದಿಂದ ಸುಮಾರು 300 ಗ್ರಾಂ ನ ಚಿನ್ನದ ಚಕ್ರ ಸರವನ್ನು ಮಾಡಿಸಿ ದೇವರಿಗೆ ತಂದು ಒಪ್ಪಿಸಿದ್ದೇನೆ ಎಂದು ತಿಳಿಸಿದರು. ಪೊಳಲಿ ದೇವರ ಪ್ರಾರ್ಥನೆ ಮಾಡಿದ ಬಳಿಕ ನಮ್ಮ ಕುಟುಂಬಕ್ಕೆ ಒಳಿತಾಗಿದೆ. ನನ್ನ ಮಕ್ಕಳ ಓದು ಹಾಗೂ ಉದ್ಯೋಗದಲ್ಲಿ ಒಳಿತಾಗಿದ್ದು, ಇದೆಲ್ಲ ದೇವರ ಕೃಪೆ ಎಂದರು.

ಚಿತ್ರನಟಿ ಮಾಳವಿಕಾ ಭೇಟಿ
ಪೊಳಲಿ ದೇವಸ್ಥಾನಕ್ಕೆ ಬಹುಭಾಷಾ ಚಿತ್ರನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪೊಳಲಿ ಆಡಳಿತ ಮಂಡಳಿಯವರು, ಮೊಕ್ತೇಸರ ವರ್ಗದವರು, ಅರ್ಚಕ ವೃಂದದವರು ಉಪಸ್ಥಿತರಿದ್ದರು.

ಹೋಮಕಲಶಾಭಿಷೇಕ- ಕುಂಭೇಶ ಕರ್ಕರಿ ಪೂಜೆ ಸಂಪನ್ನ
ಮಂಗಳವಾರ ಬೆಳಗ್ಗೆಯಿಂದ ಹಲವು ವೈದಿಕ ಕ್ರಮಗಳು ನಡೆದವು. ಮುಂಜಾನೆ ಪುಣ್ಯಾಹ, ಗಣಪತಿ ಹೋಮ, ಚಂಡಿಕಾ ಹೋಮ, ಅದ್ಭುತಶಾಂತಿ, ಸ್ವಶಾಂತಿ, ಚೋರ ಶಾಂತಿ, ತಣ್ತೀ ಕಲಶ ಪೂಜೆ, ತಣ್ತೀಹೋಮ, ಹೋಮಕಲಶಾಭಿಷೇಕಗಳು, ಕುಂಭೇಶ ಕರ್ಕರಿ  ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ ಸಂಪನ್ನಗೊಂಡಿತು. ಸಂಜೆ ಶ್ರೀ ರಾಜರಾಜೇಶ್ವರಿ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಪಂಚಶತ ಕಲಶ ಸಹಿತ ಬ್ರಹ್ಮಕಲಶಾವಾಸ, ಸುಬ್ರಹ್ಮಣ್ಯ, ಗಣಪತಿ, ಭದ್ರಕಾಳಿ, ಶಾಸ್ತದೇವರಿಗೆ ಅಷ್ಟೋತ್ತರಶತ ಕಲಶ ಸಹಿತ ಬ್ರಹ್ಮಕಲಶಾವಾಸ, ಆದಿವಾಸ ಹೋಮ ನಡೆದು ಮಹಾಪೂಜೆ ಪೂರ್ಣಗೊಂಡಿತು. ಇದರೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಎಂ. ಸುರೇಶ್‌, ಮೂಡುಬಿದಿರೆ ಮತ್ತು ಬಳಗ ತಂಡದಿಂದ ಸ್ಯಾಕ್ಸೋಪೋ ನ್‌ ವಾದನ ನಡೆದವು. ಇದರೊಂದಿಗೆ ಫ್ಯೂಷನ್‌ ಸಂಗೀತ, ಕರ್ಣಾಟಕ ಸಂಗೀತ, ತುಳು ಸಾಂಸ್ಕೃತಿಕ ಅನಾವರಣ, ಭರತನಾಟ್ಯ, ಗೀತಗಾಯನ, ಮಧುರ ಸಂಗೀತ,  ನೃತ್ಯಾನ್ವೇಷನಂ ಜರಗಿದವು. ರಾತ್ರಿ ಹಿಂದೂಸ್ಥಾನಿ ಸಂಗೀತ, ನೃತ್ಯ ಸಂಭ್ರಮ ನೆರದವರಿಗೆ ಮನೋರಂಜನೆ ಒದಗಿಸಿತು.

LEAVE A REPLY

Please enter your comment!
Please enter your name here