Home ಧಾರ್ಮಿಕ ಸುದ್ದಿ ಪಿತ್ರೋಡಿ: ತಾಂಬೂಲ ಆರೂಢ ಪ್ರಶ್ನೆ

ಪಿತ್ರೋಡಿ: ತಾಂಬೂಲ ಆರೂಢ ಪ್ರಶ್ನೆ

2165
0
SHARE

ಕಟಪಾಡಿ: ಉದ್ಯಾವರದ ಪಿತ್ರೋಡಿ ಭಾಗದಲ್ಲಿ ಇತ್ತೀಚೆಗೆ ಸಂಭ ವಿಸುತ್ತಿರುವ ದುರ್ಮರಣದಿಂದ ಆತಂಕಗೊಂಡ ಊರ ಹತ್ತು ಸಮಸ್ತರು ಗ್ರಾಮಕ್ಕೆ ಬಂದೊದಗಿದ ಸಮಸ್ಯೆಗಳ ನಿವಾರಣೆಗೆ ತಾಂಬೂಲ ಆರೂಢ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಪರಿ ಹಾರಾರ್ಥವಾಗಿ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಜರಗಿತು.

ಕೊರಂಗ್ರಪಾಡಿ ಕೃಷ್ಣಮೂರ್ತಿ ತಂತ್ರಿ, ಉದ್ಯಾವರ ಗಣಪತಿ ದೇವಸ್ಥಾನದ ಅರ್ಚಕ ರಂಗನಾಥ್‌ ಭಟ್‌ ಪೌರೋಹಿತ್ಯದಲ್ಲಿ ಸೆ.17ರಂದು ಪಿತ್ರೋಡಿ ಸಾರ್ವಜನಿಕ ಶ್ರೀ ನಾಗದೇವರ ಸನ್ನಿಧಿಯಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಪ್ರಸನ್ನ ಪೂಜೆ, ಭಜನಾ ಕಾರ್ಯಕ್ರಮಗಳು ನೆರವೇರಿತು.

ಸೆ.16ರಂದು ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗಣಪತಿ ಹೋಮ ಅನಂತರ ಪಿತ್ರೋಡಿ ಸಾರ್ವಜನಿಕ ಶ್ರೀ ನಾಗದೇವರ ಸನ್ನಿಧಿಯಲ್ಲಿ ದೋಷ
ನಿವೃತ್ತಿಗೆ ಮೃತ್ಯುಂಜಯ ಹೋಮ, ನವಗ್ರಹ ಯಾಗ, ಐಕ್ಯಮತ್ಯ ಭಾಗ್ಯ ಸೂಕ್ತ ಪಾರಾಯಣ ನಡೆದು ಸರ್ವಬಾಧಾ ನಿವೃತ್ತಿಗೆ ಹೋಮ ಹವನಾದಿಗಳು ಸಂಜೆ ಜರಗಿತ್ತು.

ಈ ಸಂದರ್ಭ ವೆಂಕಟರಮಣ ಭಜನಾ ಮಂದಿರದ ಗೋಪಾಲ ಅಮೀನ್‌, ಉಮೇಶ್‌ ಕರ್ಕೇರ, ಗ್ರಾಮದ ಪ್ರಮುಖರಾದ ವೀರಪ್ಪ ಪಾಲನ್‌, ಸುಂದರ ಕೋಟ್ಯಾನ್‌, ವಸಂತ ಸಾಲ್ಯಾನ್‌, ವೈನತಾಯ, ಚಂದ್ರಶೇಖರ್‌ ಮೈಂದನ್‌, ಗ್ರಾಮ ಪಂಚಾಯತ್‌ ಸದಸ್ಯರಾದ ಗಿರೀಶ್‌ ಸುವರ್ಣ, ರಾಜೇಶ್‌ ಕುಂದರ್‌, ಕಿರಣ್‌ ಕುಮಾರ್‌, ಊರಿನ ಹಿರಿಯರು, ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here