Home ಧಾರ್ಮಿಕ ಕಾರ್ಯಕ್ರಮ ಪಿಲಿಕುಂಜೆ ಐವರ್‌ ಭಗವತೀ ಕ್ಷೇತ್ರ: ಕಳಿಯಾಟ ಮಹೋತ್ಸವ ಸಂಪನ್ನ

ಪಿಲಿಕುಂಜೆ ಐವರ್‌ ಭಗವತೀ ಕ್ಷೇತ್ರ: ಕಳಿಯಾಟ ಮಹೋತ್ಸವ ಸಂಪನ್ನ

598
0
SHARE

ಕಾಸರಗೋಡು : ಪಿಲಿಕುಂಜೆ ಶ್ರೀ ಐವರ್‌ ಭಗವತೀ ಕ್ಷೇತ್ರದಲ್ಲಿ ಆರು ದಿನಗಳಿಂದ ನಡೆದ ಕಳಿಯಾಟ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಕಳಿಯಾಟ ಮಹೋತ್ಸವದ ಕೊನೆಯ ದಿನ ಬೆಳಗ್ಗೆ ಕಾಳಪುಲಿಯನ್‌ ದೈವ, ಕಾರ್ಯಕ್ಕಾರನ್‌, ಪುಲಿಕಂಡನ್‌ ದೈವ, ವೇಟ್ಟಕೊರುಮಗನ್‌ ದೈವ, ಮಂತ್ರಮೂರ್ತಿ ದೈವ, ಸಂಜೆ ಪುಲ್ಲೂರಾಳಿ ದೈವ, ವಿಷ್ಣುಮೂರ್ತಿ ದೈವ, ಪಿಲಿಕುಂಜೆ ವಿಷ್ಣುಮೂರ್ತಿ ದೇವರ ಕಟ್ಟೆಗೆ ಭೇಟಿಗೆ ಹೊರಡುವುದು.

ಆ ಬಳಿಕ ಪುಲ್ಲೂರ್ಣನ್‌ ದೈವ (ಹೂಮುಡಿ), ಆನೆಬಾಗಿಲಿನಲ್ಲಿರುವ ದೇವರ ಕಟ್ಟೆಗೆ ಭೇಟಿಗೆ ಹೊರಟು, ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ ಭಜನಾ ಸಂಘದವರಿಂದ ಭಜನೆ, ರಾತ್ರಿ ಪುಷ್ಪಾರ್ಚನೆ ಪೂಜೆ, ಹೆಣ್ಮಕ್ಕಳ ಚಪ್ಪರ ಮುಹೂರ್ತ, ಬಲಿ ಉತ್ಸವ, ಬಿಂಬ ದರ್ಶನ ಇತ್ಯಾದಿ ಅನಂತರ ಪ್ರಸಾದ ವಿತರಣೆ, ಕೂಟ್ಟ ಅಡಯಾಳಂ, ಪುಲ್ಲೂರ್ಣನ್‌ ದೈವದ ಹೂಮುಡಿ ಶ್ರದ್ಧಾಭಕ್ತಿಯೊಂದಿಗೆ ಅವರೋಹಣಗೈದು ಕಾರ್ನವರ್‌ ಕಾಳಿಮಾಡದಲ್ಲಿ ಸಮರ್ಪಿಸುವುದರೊಂದಿಗೆ ಉತ್ಸವ ಮುಕ್ತಾಯಗೊಂಡಿತು. ಆ ಬಳಿಕ ಭಂಡಾರ ನಿರ್ಗಮನಗೊಂಡಿತು.

LEAVE A REPLY

Please enter your comment!
Please enter your name here