ಕಾಸರಗೋಡು: ನಗರದ ಪಿಲಿ ಕುಂಜೆಯ ಶ್ರೀ ಐವರ್ ಭಗವತಿ ಕ್ಷೇತ್ರದಲ್ಲಿ ಫೆ. 27ರ ವರೆಗೆ ನಡೆಯುವ ಕಳಿಯಾಟ ಮಹೋತ್ಸವ ಆರಂಭಗೊಂಡಿತು.
ಇದೇ ಸಂದರ್ಭದಲ್ಲಿ ಅಗ್ರಶಾಲೆಯನ್ನು ಲೋಕಾರ್ಪಣೆಗೈಯಲಾಯಿತು. ಫೆ. 22ರಂದು ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ರಕ್ತೇಶ್ವರಿ, ಬ್ರಹ್ಮರಕ್ಷಸ್ಸು, ಗುಳಿಗ ಎಂಬಿವುಗಳಿಗೆ ತಂಬಿಲ ಹಾಗೂ ಶುದ್ಧಿಕಲಶ, ಪ್ರಸಾದ ವಿತರಣೆ, ಆನೆ ಚಪ್ಪರ ಅಲಂಕರಿಸುವುದು ಮತ್ತು ಆನೆ ಚಪ್ಪರ ಏರಿಸುವುದು, ಭಂಡಾರ ಕ್ಷೇತ್ರದಿಂದ ಭಂಡಾರ ಹೊರಡುವುದು, ಕಲಶಾಟ್,
ಕೊಡಿಯೆಲೆ ಇಡುವುದು, ಭಗವತಿ ಮಹಿಳಾ ಸಂಘದವರಿಂದ ತಿರುವಾದಿರ, ಪ್ರತಿಷ್ಠಾದಿನ ಆಚರಣೆ ಪ್ರಯುಕ್ತ ಸುತ್ತು ದೀಪಾಲಂಕೃತವಾದ ವಿಶೇಷ ಪೂಜೆ, ಮರುಪುತ್ತರಿ ಉತ್ಸವ, ಪ್ರಸಾದ ವಿತರಣೆ ನಡೆಯಿತು.
ಫೆ.23 ರಂದು ಮೊದಲ ಕಳಿಯಾಟದ ಅಂಗವಾಗಿ ಪುಲ್ಲೂರ್ಣನ್, ಕಾಳ ಪುಲಿಯನ್, ಪುಲಿಕಂಡನ್ ಎಂಬೀ ದೈವಗಳ ವೆಳ್ಳಾಟ, ಶ್ರೀ ಭಗವತಿ ಸೇವಾ ಸಂಘ ಬಟ್ಟಂಬಾರ ಗ್ರಾಮ ಸಮಿತಿ ವತಿಯಿಂದ ವರ್ಣಾಲಂಕೃತ ಹುಲ್ಪೆ ಸಮರ್ಪಣೆ, ಕರಿಂದಿರಿ ನಾಯರ್ ದೈವದ ವೆಳ್ಳಾಟ, ಬಲಿಯುತ್ಸವ ಬಿಂಬದರ್ಶನ, ಪುಲಿಚ್ಚೇಕವನ್, ಪುಲ್ಲೂರಾಳಿ ಭಗವತೀ ಎಂಬೀ ದೈವಗಳ ತೋಟ್ಟಂ, ವಿಷ್ಣುಮೂರ್ತಿ ದೈವದ ತೊಡಂಙಲ್, ಕುಳಿಚ್ಚೇಟ್ಟಂ, ಪುಲಿಚ್ಚೇಕವನ್ ದೈವ, ಪ್ರಸಾದ ವಿತರಣೆ, ಕರಿಂದಿರಿ ನಾಯರ್ ದೈವ ನಡೆಯಿತು.