Home ಧಾರ್ಮಿಕ ಕಾರ್ಯಕ್ರಮ ಪಿಜಕಳ ದೇವಸ್ಥಾನ: ಪ್ರತಿಷ್ಠಾ ವಾರ್ಷಿಕೋತ್ಸವ

ಪಿಜಕಳ ದೇವಸ್ಥಾನ: ಪ್ರತಿಷ್ಠಾ ವಾರ್ಷಿಕೋತ್ಸವ

1511
0
SHARE
ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕಡಬ: ಇಲ್ಲಿನ ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 13ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ಜರಗಿತು.

ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಪ್ರಾಯಃಶ್ಚಿತ್ತ ಹೋಮ, ಪಂಚವಿಂಶತಿ ಕಲಶಪೂಜೆ, ಕಲಶಾಭಿಷೇಕ, ನಾಗದೇವರಿಗೆ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ ನೆರವೇರಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ
ಅನ್ನಸಂತರ್ಪಣೆ ಜರಗಿತು.

ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಡಾ| ಎಚ್‌. ಮೋಹನ ರಾವ್‌ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಹಕರಿಸಿದರು.

ದೇವಾಲಯದ ಆಡಳಿತಾಧಿಕಾರಿ, ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಕಾರ್ಯದರ್ಶಿ ಅಣ್ಣಿ ನಾಯ್ಕ ಪರಪ್ಪು, ಕೋಶಾಧಿಕಾರಿ ಕೃಷ್ಣಪ್ಪ ಗೌಡ ಪಿಜಕಳ, ಉಪಾಧ್ಯಕ್ಷ ಮೋನಪ್ಪ ಗೌಡ ನಾಡೋಳಿ, ಶ್ರೀ ಮಹಾವಿಷ್ಣು ಭಜನ ಮಂಡಳಿಯ ಅಧ್ಯಕ್ಷ ದೇವರಾಯ ಆಚಾರ್ಯ, ಭಜನ ಪರಿಷತ್‌ನ ಕಡಬ ವಲಯಾಧ್ಯಕ್ಷ ಸುಂದರ ಗೌಡ, ಪ್ರಮುಖರಾದ ಸಾಂತಪ್ಪ ಗೌಡ ಪಿಜಕಳ, ದಯಾನಂದ ಗೌಡ ಆರಿಗ ಕಂಗುಳೆ, ಪೂವಪ್ಪ ಗೌಡ ಪಿಜಕಳ, ಕೊರಗಪ್ಪ ಗೌಡ ಕಲ್ಲರ್ಪೆ , ಪುರಂದರ ರೈ, ಗಿರಿಧರ ರೈ, ಬಾಲಕೃಷ್ಣ ರೈ ಆರ್ತಿಲ, ಹೇಮಾವತಿ ಕೊರಗಪ್ಪ ಗೌಡ ಕಲ್ಲರ್ಪೆ, ರುಕ್ಮಿಣಿ ಕೆ.ಬಿ., ಸುಂದರ ಗೌಡ ಅಂಗಣ, ರಂಜೀವ್‌ ಪಿಜಕಳ, ಆನಂದ ಗೌಡ ಕೊಂಕ್ಯಾಡಿ ಮುಂತಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ಧಾರ್ಮಿಕ ಸಭೆಯ ಬಳಿಕ ಪಿಜಕಳ ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳು, ಕುಮಾರಧಾರ ಯುವಕ ಮಂಡಳ ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಅನಂತರ ಪಿಜಕಳ ಶ್ರೀ ಮಹಾವಿಷ್ಣು ಕೃಪಾಪೋಷಿತ ಯಕ್ಷಗಾನ ಮಂಡಳಿ, ಯಕ್ಷಗಾನ ಕಲಾವಿದ ಎಡಮಂಗಲ ಲಕ್ಷ್ಮಣ ಆಚಾರ್ಯ ಅವರ ಶಿಷ್ಯವೃಂದ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತುಳು ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here