ಪೆರುವಾಯಿ : ದೇವಾಲಯ ನಮ್ಮೆಲ್ಲರ ಶ್ರದ್ಧಾ ಕೇಂದ್ರ. ಭಕ್ತರನ್ನು ಅನುಗ್ರಹಿಸುವ ಗೋಪಾಲಕೃಷ್ಣನನ್ನು ಆರಾಧಿಸುವುದು ಎಲ್ಲರ ಕರ್ತವ್ಯ. ಗರ್ಭ ಗೃಹದೊಳಗೆ ದೇವ – ಜೀವನ ಸಮ್ಮಿಲನ ವಿದೆ. ಈಶ ಪ್ರೀತಿಯೊಂದಿಗೆ ದೇಶಪ್ರೇಮ ಮೊಳಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ನಡೆದ ಸುಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ, ಉದ್ಯಮಿ ವಸಂತ ಪೈ ಬದಿಯಡ್ಕ, ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಗಣೇಶ ಕುಮಾರ್ ದೇಲಂತ ಮಜಲು, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ನಾರಾಯಣ ಹೆಗ್ಡೆ ಕೋಡಿಬೈಲು, ಮುರಳೀಧರ ರೈ ಮಠಂತಬೆಟ್ಟು, ನಿವೃತ್ತ ಸೇನಾಧಿಕಾರಿ ವಿ. ಪಾರ್ಶ್ವನಾಥ ಶೆಟ್ಟಿ ತಿರುವೈಲುಗುತ್ತು, ಕಕ್ಕೆಪದವು ಪಂಚದುರ್ಗಾ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯ ಜಗನ್ನಾಥ ಶೆಟ್ಟಿ ಕಕ್ಕೆಪದವು, ದಯಾಸಾಗರ ಚೌಟ ಕಳ್ಳಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ವಿಟ್ಲ ತಾಲೂಕು ಸಂಪರ್ಕ ಪ್ರಮುಖ್ ವಿನೋದ್ ಶೆಟ್ಟಿ ಅಡ್ಕಸ್ಥಳ ಉಪಸ್ಥಿತರಿದ್ದರು.
ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಡಿವಾಯಿ ನಾರಾಯಣ ರೈ ಸ್ವಾಗ ತಿಸಿ, ಭುವನಾ, ನಿಷ್ಮಿತಾ ಆಶಯಗೀತೆ ಹಾಡಿ ದರು. ಕಾರ್ಯಾಧ್ಯಕ್ಷ ಎಂ. ಚಂದ್ರಹಾಸ ಕಾವ ಗುರುಪುರ ವಂದಿಸಿ, ಮಂಜುನಾಥ ಶೆಟ್ಟಿ ಕಲಾೖತ್ತಿಮಾರು, ಪಾಲಾಕ್ಷ ರೈ ಕಲಾೖತ್ತಿಮಾರು ನಿರೂಪಿಸಿದರು.