Home ಧಾರ್ಮಿಕ ಸುದ್ದಿ ಪೆರುವಾಜೆ: ದರ್ಶನ ಬಲಿ, ಬಟ್ಟಲು ಕಾಣಿಕೆ

ಪೆರುವಾಜೆ: ದರ್ಶನ ಬಲಿ, ಬಟ್ಟಲು ಕಾಣಿಕೆ

1227
0
SHARE

ಸುಳ್ಯ : ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.

ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಿಸಲಾಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ದೀಪೋತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು, ಸದಸ್ಯರು ಉಪಸ್ಥಿತರಿದ್ದರು.

ಇಂದು ಪೇಟೆ ಸವಾರಿ
ಜ. 19ರಂದು ಬೆಳಗ್ಗೆ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ದೇವರ ಬಲಿ ಹೊರಟು ಉತ್ಸವ ವಸಂತಕಟ್ಟೆ ಪೂಜೆ, ಬೆಳ್ಳಾರೆಗೆ ಪೇಟೆ ಸವಾರಿ ಹೋಗಿ ಬಂದು ಬೆಡಿ ಕಟ್ಟೆಯಲ್ಲಿ ಸಿಡಿಮದ್ದು ಪದರ್ಶನ, ರಾತ್ರಿ ಗಂಟೆ 10.30ಕ್ಕೆ ಮಹಾಪೂಜೆ, ಅನಂತರ ದೇವರ ಬಲಿ ಹೊರಟು ಭೂತ ಬಲಿ ಉತ್ಸವ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here