Home ಧಾರ್ಮಿಕ ಕಾರ್ಯಕ್ರಮ ಪೆರ್ಮನ್ನೂರು: ಶತಮಾನೋತ್ಸವ ಸಂಭ್ರಮ ಸಮಾರೋಪ ದಿವ್ಯ ಬಲಿಪೂಜೆ

ಪೆರ್ಮನ್ನೂರು: ಶತಮಾನೋತ್ಸವ ಸಂಭ್ರಮ ಸಮಾರೋಪ ದಿವ್ಯ ಬಲಿಪೂಜೆ

1973
0
SHARE
ಡಾ| ಎಲೋಷಿಯಸ್‌ ಪಾವ್ಲ್ ಡಿ'ಸೋಜಾ ದಿವ್ಯ ಬಲಿಪೂಜೆ ನೆರವೇರಿಸಿದರು

ಉಳ್ಳಾಲ: ಇಲ್ಲಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್‌ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮ ಸಮಾರೋಪದ ಅಂಗವಾಗಿ ದಿವ್ಯ ಬಲಿಪೂಜೆ ರವಿವಾರ ಸಂಜೆ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂದನೀಯ ಡಾ| ಎಲೋಷಿಯಸ್‌ ಪಾವ್ಲ್ ಡಿ’ಸೋಜಾ ನೆರವೇರಿಸಿದರು.

ಪ್ರವಚನಕಾರರರಾಗಿ ಗುಲ್ಬರ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ| ರೋಬರ್ಟ್‌ ಮಿರಾಂದ ಭಾಗವಹಿಸಿದ್ದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಲೋರನ್‌ ಮುಕ್ಕುಝಿ ಸಂದೇಶ ನೀಡಿದರು. ಪೆರ್ಮನ್ನೂರು ಧರ್ಮಕೇಂದ್ರದ ಧರ್ಮಗುರು ಡಾ| ಜೆ.ಬಿ.ಸಲ್ದಾನ ಸಹಿತ ಸಹಾಯಕ ಧರ್ಮ ಗುರುಗಳು, ಧರ್ಮಕೇಂದ್ರದ ಪಾಲನಾ ಪರಿಷತ್‌ನ ಪದಾಧಿಕಾರಿಗಳು, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಧರ್ಮಕೇಂದ್ರದ ಧರ್ಮಗುರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here